newsics.com
ಗುಜರಾತ್ : ಹಿರಿಯ ವಿದ್ಯಾರ್ಥಿಗಳು ಮಾಡಿದ ರ‍್ಯಾಗಿಂಗ್ ನಿಂದ MBBS ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್ನ ಪಟಾನ್ ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ರ‍್ಯಾಗಿಂಗ್ನಿಂದಾಗಿ ಮೂರು ಗಂಟೆಗಳ ಕಾಲ ಒಂದೇ ಕಡೆ ನಿಂತಿದ್ದ ಕಾರಣ ಸಾವನ್ನಪ್ಪಿದ್ದಾರೆ.
ಅನಿಲ್ ಮೆಥನಿಯಾ(18) ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಹೌದು, ಮೂರು ಗಂಟೆಗಳ ಕಾಲ ನಿಂತಿದ್ದಕ್ಕೆ ತಲೆತಿರುಗಿ ಬಿದ್ದಿದ್ದ ವಿದ್ಯಾರ್ಥಿಯು ಕುಸಿದು ಬಿದ್ದ ನಂತರ ಆಸ್ಪತ್ರೆಗೆ ಸಾಗಿಸಲಾಗಿದೆ.
ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಸದ್ಯ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭವಾಗಿದ್ದು , ಸೀನಿಯರ್ ವಿದ್ಯಾರ್ಥಿಗಳನ್ನ ವಶಕ್ಕೆ ಪಡೆಯಲಾಗಿದೆ.