newsics.com
ಭಾರತದಲ್ಲಿ ಶೀಘ್ರದಲ್ಲೇ ನೀರಿನ ಆಳದಲ್ಲಿ ರೈಲುಗಳು ಚಲಿಸಲಿವೆ. ಈ ರೈಲುಗಳಿಗೆ ಪೆಟ್ರೋಲ್, ಡೀಸೆಲ್, ವಿದ್ಯುತ್ ಅಗತ್ಯವಿಲ್ಲ.

ಇಂದು ಭಾರತೀಯ ರೈಲ್ವೆಯ ರೈಲುಗಳು ಡೀಸೆಲ್ ಮತ್ತು ವಿದ್ಯುತ್ತಿನಲ್ಲಿ ಚಲಿಸುತ್ತವೆ. ವಂದೇ ಭಾರತ್, ಶತಾಬ್ದಿ, ತೇಜಸ್‌ನಂತಹ ಐಷಾರಾಮಿ ರೈಲುಗಳು ಚಾಲನೆಯಲ್ಲಿರುವಾಗ, ಬುಲೆಟ್ ರೈಲು ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಇಷ್ಟೆಲ್ಲದರ ನಡುವೆ, ಮುಂದಿನ ತಿಂಗಳಿನಿಂದ, ಡೀಸೆಲ್ ಅಥವಾ ವಿದ್ಯುತ್ ಅಗತ್ಯವಿಲ್ಲದ, ನೀರಿನಲ್ಲಿ ಚಲಿಸುವ ರೈಲು ಚಾಲನೆಗೆ ಬರಲಿದೆ.
ದೇಶದಲ್ಲೇ ಮೊದಲ ಬಾರಿಗೆ ನೀರಿನಿಂದ ಚಲಿಸುವ ರೈಲು ಚಾಲನೆಗೆ ಬರಲಿದೆ. ಈ ರೈಲನ್ನು ಹೈಡ್ರೋಜನ್ ರೈಲು ಎಂದು ಕರೆಯಲಾಗುತ್ತದೆ. ಈ ರೈಲಿನ ಪ್ರಾಯೋಗಿಕ ಓಟ 2024ರ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. 2024 ರ ಡಿಸೆಂಬರ್‌ನಲ್ಲಿ ಅದರ ಪ್ರಾಯೋಗಿಕ ಓಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಹೈಡ್ರೋಜನ್‌ನಿಂದ ಚಲಿಸುವ ಈ ರೈಲಿಗೆ ಒಂದು ಗಂಟೆಗೆ 40,000 ಲೀಟರ್ ನೀರು ಬೇಕಾಗುತ್ತದೆ. ಇದಕ್ಕಾಗಿ ನೀರಿನ ಸಂಗ್ರಹ ಘಟಕವನ್ನು ನಿರ್ಮಿಸಲಾಗುತ್ತದೆ.
‘ನೀರಿನಿ ಆವಿಯಿಂದ’ ಚಲಿಸುವ ಹೈಡ್ರೋಜನ್ ರೈಲಿನ ಹೈಡ್ರೋಜನ್ ಇಂಧನ ಕೋಶ ಮತ್ತು ಮೂಲಸೌಕರ್ಯ ಪರೀಕ್ಷೆ ಯಶಸ್ವಿಯಾಗಿದೆ. ಕೋಶ ಮತ್ತು ಹೈಡ್ರೋಜನ್ ಘಟಕದ ವಿನ್ಯಾಸವನ್ನು ಅನುಮೋದಿಸಲಾಗಿದೆ.
ದೇಶಾದ್ಯಂತ 35 ಹೈಡ್ರೋಜನ್ ರೈಲುಗಳನ್ನು ಚಾಲನೆ ಮಾಡಲು ಸಿದ್ಧಪಡಿಸಲಾಗುತ್ತಿದೆ. ರೈಲ್ವೆ ಮಾಹಿತಿಯ ಪ್ರಕಾರ, ಒಂದು ಹೈಡ್ರೋಜನ್ ರೈಲಿನ ಬೆಲೆ ಸುಮಾರು 80 ಕೋಟಿ ರೂ. ಇದ್ದು, ನೀರಿನಲ್ಲಿ ರೈಲು ಹೇಗೆ ಚಲಿಸುತ್ತದೆ ಎಂದು ಜನರು ಆಶ್ಚರ್ಯಪಡಬಹುದು.
ಭಾರತೀಯ ರೈಲ್ವೆ 2030 ರ ವೇಳೆಗೆ ಇಂಗಾಲದ ಹೊರಸೂಸುವಿಕೆ ಇಲ್ಲದ ಸ್ಥಿತಿಯನ್ನು ಸೃಷ್ಟಿಸಲು ಗುರಿ ಹೊಂದಿದೆ. ಈ ಗುರಿಯತ್ತ ಸಾಗುವ ಪ್ರಯತ್ನವಾಗಿ, ಹೈಡ್ರೋಜನ್ ರೈಲುಗಳನ್ನು ಚಾಲನೆ ಮಾಡಲು ರೈಲ್ವೆ ನಿರ್ಧರಿಸಿದೆ. ಈ ರೈಲುಗಳ ಚಾಲನೆ 2024-25ರಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
ಇನ್ನು, ದೇಶದ ಮೊದಲ ಹೈಡ್ರೋಜನ್ ರೈಲು ಹರಿಯಾಣದಲ್ಲಿ ಜಿಂದ್-ಸೋನಿಪತ್ ಮಾರ್ಗದಲ್ಲಿ 90 ಕಿ.ಮೀ. ದೂರ ಚಲಿಸಲಿದೆ ಎನ್ನಲಾಗಿದೆ. ಇದಲ್ಲದೆ, ಈ ರೈಲನ್ನು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ, ನೀಲಗಿರಿ ಪರ್ವತ ರೈಲು, ಕಲ್ಕಾ ಶಿಮ್ಲಾ ರೈಲು, ಮಾಥೆರಾನ್ ರೈಲ್ವೆ, ಕಾಂಗ್ರಾ ಕಣಿವೆ, ಬಿಲ್ಮೋರಾ ವಾಗೈ ಮತ್ತು ಮಾರ್ವಾರ್-ದೇವ್‌ಗಢ್ ಮಾಧ್ರಿಯಾ ಮಾರ್ಗಗಳಲ್ಲಿ ಚಲಾಯಿಸಲು ರೈಲ್ವೆ ಯೋಜಿಸಿದೆ.