newsics.com
ನವದೆಹಲಿ: ಇಂದು (ನ.12) ಏರ್ ಇಂಡಿಯಾ ಜತೆ ವಿಲೀನಗೊಳ್ಳಲಿರುವ ವಿಸ್ತಾರ ವಿಮಾನಯಾನ (Vistara Airlines) ಸಂಸ್ಥೆ ಸೋಮವಾರ ತನ್ನ ಅಂತಿಮ ಹಾರಾಟ ನಡೆಸಿತು.
ಕೆಲವು ದಿನಗಳ ಹಿಂದೆ ವಿಸ್ತಾರ ಹಾಗೂ ಏರ್ ಇಂಡಿಯಾ (Air India) ಒಪ್ಪಂದ ಮಾಡಿಕೊಂಡು ವಿಲೀನಗೊಳಿಸಲು ನಿರ್ಧರಿಸಿದ್ದವು. ವಿಸ್ತಾರ ಕಳೆದ 10 ವರ್ಷಗಳಲ್ಲಿ ಕಾರ್ಯಾರಂಭ ಮಾಡಿದ ಏಕೈಕ ಸಂಪೂರ್ಣ ಸೇವಾ ಏರ್‌ಲೈನ್ ಆಗಿತ್ತು. ಕಿಂಗ್‌ಫಿಷರ್ ಮತ್ತು ಏರ್ ಸಹಾರಾಗಳು ಕಾರ್ಯಾರಂಭ ನಿಲ್ಲಿಸಿದಾಗ 2015ರಲ್ಲಿ ವಿಸ್ತಾರ ಶುರುವಾಗಿತ್ತು.
ಇದೀಗ ವಿಸ್ತಾರ ಏರ್‌ಲೈನ್ಸ್ ಏರ್ ಇಂಡಿಯಾ ಜತೆ ವಿಲೀನಗೊಳ್ಳುತ್ತಿದ್ದು, ವಿಲೀನದ ಮೂಲಕ ಸಿಂಗಾಪುರ್ ಏರ್‌ಲೈನ್ಸ್‌ಗೆ ಏರ್ ಇಂಡಿಯಾದಲ್ಲಿ ಶೇ 25.1 ಹಂಚಿಕೆ ದೊರೆಯುತ್ತದೆ. ವಿದೇಶಿ ನೇರ ಹೂಡಿಕೆ (FDI) ಉಗಮದ ನಂತರ ವಿದೇಶಿ ವಿಮಾನಯಾನ ಸಂಸ್ಥೆಯೊಂದಿಗೆ ಸಹ-ಮಾಲೀಕತ್ವ ಹೊಂದಿದ್ದ ಮತ್ತೊಂದು ಭಾರತೀಯ ಏರ್‌ಲೈನ್ ವಿಸ್ತಾರ ಇನ್ನು ಮುಂದೆ ತನ್ನ ಕಾರ್ಯಾಚರಣೆ ನಿಲ್ಲಿಸುತ್ತಿದೆ.