newsics.com
ಮೈಸೂರು: ಮನುಷ್ಯನಿಗಿಂತ ಎರಡು ಪಟ್ಟು ದೊಡ್ಡದಿರುವ ದೈತ್ಯ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಆ ದೈತ್ಯ ಹಾವು ಮರವನ್ನೇರುತ್ತಾ ಹೋಗಿದೆ. ಈ ದೃಶ್ಯವನ್ನು ಕಂಡು ಅಲ್ಲಿದ್ದ ಕಾಡಿನ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಅರಣ್ಯದ ಸಮೀಪದಲ್ಲಿರುವ ಹಾಡಿಯ ಬಳಿ ಮನುಷ್ಯನಿಗಿಂತ ಎರಡು ಪಟ್ಟು ದೊಡ್ಡದಿರುವ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದ್ದು, ಈ ದೃಶ್ಯವನ್ನು ಕಂಡು ಅಲ್ಲಿದ್ದ ಕಾಡಿನ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಈ ಕುರಿತ ವಿಡಿಯೋವನ್ನು Nammoor Mysore-ನಮ್ಮೂರ್ ಮೈಸೂರ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಹಾಡಿ ಬಳಿಯೇ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಕುತೂಹಲದಿಂದ ನೋಡಿದ ಕಾಡಿದ ಮಕ್ಕಳು…” ಎಂಬ ಶೀರ್ಷಿಕೆ ಬರೆದುಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅರಣ್ಯದ ಸಮೀಪದ ಹಾಡಿಯ ಬಳಿ ದೈತ್ಯ ಗಾತ್ರದ ಹೆಬ್ಬಾವು ಕಾಣಿಸಿಕೊಂಡ ದೃಶ್ಯವನ್ನು ಕಾಣಬಹುದು. ಜನರು ನೋಡ ನೋಡುತ್ತಿದ್ದಂತೆ ಈ ಹೆಬ್ಬಾವು ಭಯದಿಂದ ನಿಧಾನವಾಗಿ ಮರವನ್ನು ಏರುತ್ತಾ ಹೋಗಿದೆ. ಈ ದೃಶ್ಯವನ್ನು ಕಂಡು ಅಲ್ಲಿದ್ದ ಕಾಡಿನ ಮಕ್ಕಳು ಮತ್ತು ಜನರು ಜೋರಾಗಿ ಕಿರುಚಾಡಿದ್ದಾರೆ.