newsics.com
ಬೆಂಗಳೂರು : ಈ ಫೋಟೋದಲ್ಲಿರುವ ಬಾಲಕ ಇಂದು ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆ ಇರುವ ನಟ. ಈ ನಟ ಮಾತ್ರವಲ್ಲ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ.
ಕನ್ನಡ ಮಾತ್ರವಲ್ಲದೇ ಟಾಲಿವುಡ್ ಮತ್ತು ಕಾಲಿವುಡ್‌ನಲ್ಲೂ ಡಾಲಿ ಧನಂಜಯ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅಭಿಮಾನಿಗಳಿಂದ ಕಾಮನ್ ಮ್ಯಾನ್ ಹೀರೋ ಎಂದೇ ಬಿರುದು ಪಡೆದಿರುವ ಧನಂಜಯ್ ಅಭಿನಯ ಅವರು ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ.

ಇಂಜಿನಿಯರಿಂಗ್ ಓದಿದ್ದ ಡಾಲಿ ‘ಜಯನಗರ 4th ಬ್ಲಾಕ್’ ಶಾರ್ಟ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ನಂತರ 2013ರಲ್ಲಿ ರಿಲೀಸ್ ಆದ ‘ಡೈರೆಕ್ಟರ್ ಸ್ಪೆಷಲ್’ ಚಿತ್ರದ ಮೂಲಕ ಅವರು ಹೀರೋ ಆಗಿ ಮಿಂಚಿದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದರು. ಸದ್ಯ ಅವರ ಕೈಯಲ್ಲಿ ‘ಜೀಬ್ರಾ’, ‘ಪುಷ್ಪ 2’, ‘ಉತ್ತರಕಾಂಡ’ ಮೊದಲಾದ ಸಿನಿಮಾಗಳು ಇವೆ.
ನಟ ಡಾಲಿ ಧನಂಜಯ್ ಅವರು ತುಂಬಾನೇ ಸಾಮಾನ್ಯ ಕುಟುಂಬದಿಂದ ಬಂದವರು. ಅವರು ಈಗ ಬೇಡಿಕೆಯ ಸ್ಟಾರ್ ಹೀರೋ ಆಗಿದ್ದಾರೆ ಎಂದರೆ ಹೆಮ್ಮೆ ಪಡೆಲೇಬೇಕು. ‘ಟಗರು’ ಚಿತ್ರದಿಂದ ಅವರ ಬದುಕು ಸಂಪೂರ್ಣವಾಗಿ ಬದಲಾಗಿತ್ತು. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ.