Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಕ್ಲಿನಿಕಲ್ ಡಿಪ್ರೆಶನ್ ಅಂದ್ರೇನು..? ಈ ಬಗ್ಗೆ ವೈದ್ಯರು ಹೇಳಿದ್ದೇನು?
ಆರೋಗ್ಯಲೈಫ್‌ಸ್ಟೈಲ್

ಕ್ಲಿನಿಕಲ್ ಡಿಪ್ರೆಶನ್ ಅಂದ್ರೇನು..? ಈ ಬಗ್ಗೆ ವೈದ್ಯರು ಹೇಳಿದ್ದೇನು?

Share
2 Min Read
SHARE

newsics.com

ನಿಮಗೆ ಬರೀ ಬೇಸರ, ಕೊರಗು, ದುಃಖ ಜೀವನ ಅನ್ನೋ ದುಗುಡ 14 ದಿನಕ್ಕೂ ಅಧಿಕ ಕಾಲ ಬಾಧಿಸುತ್ತಾ? ಹಾಗಾದ್ರೆ ನೀವು ಕ್ಲಿನಿಕಲ್ ಡಿಪ್ರೆಶನ್ ನಲ್ಲಿ ಇದ್ದೀರ ಅಂತಲೇ ಅರ್ಥ.

ಹೌದು, ಒಂದಲ್ಲ ಎರಡಲ್ಲ. 14 ದಿನಗಳ ಕಾಲ ನಿಮಗೆ ಒಂದು ವಿಚಾರದ ಬಗ್ಗೆ ಅತೀವ ಆಲೋಚನೆ. ನಿದ್ದೆ ಬಾರದೇ ಊಟ ತಿನ್ನದೆ ದುಃಖಿಸುತ್ತಾ ಕಾಲ ಕಳೆಯುವ ಸ್ಥಿತಿ. ಹಾಗಿದ್ರೆ ಬಿ ಅಲರ್ಟ್ ನಿಮ್ಮನ್ನ ಕಾಡ್ತಾ ಇದೆ ಕ್ಲಿನಿಕಲ್ ಡಿಪ್ರೆಶನ್ಡಿಪ್ರೆಶನ್. ಇದು ಇತ್ತೀಚಿಗೆ ಅತೀ ಕಾಮನ್ ಆಗಿ ಎಲ್ಲಾ ವಯಸ್ಸಿನವರು ಬರುತ್ತಿರುವ ಮಾನಸಿಕ ಕಾಯಿಲೆ. ದೇಹಕ್ಕೆ ಜ್ವರ, ನೆಗಡಿ, ಕೆಮ್ಮು ಬರುವಂತೆ ಮನಸ್ಸಿಗೂ ಕೂಡ ಕೆಲವೊಮ್ಮೆ ಕಾಯಿಲೆಗಳು ಬರುತ್ತವೆ.

ಈ ಬಗ್ಗೆ ಮಾತನಾಡಿದ ಮನಶಾಸ್ತ್ರಜ್ಞರಾದ ಡಾಕ್ಟರ್ ನಿಶ್ಚಿತಾ ಜೆ, ಇತ್ತೀಚಿಗೆ ಡಿಪ್ರೇಶನ್ ಅಥವಾ ಕ್ಲಿನಿಕಲ್ ಡಿಪ್ರೆಶನ್ ಒಳಗಾಗಿ ಆಸ್ಪತ್ರೆ ಕದ ತಟ್ಟುತ್ತಿರುವರ ಸಂಖ್ಯೆ ಡಬಲ್ ಆಗಿದೆ. ಡಾಕ್ಟರ್ ಹೇಳುವ ಪ್ರಕಾರ ನಿರಂತರ ಎರಡು ವಾರಗಳ ಕಾಲ ನಿಮಗೆ ಬೇಜಾರು ಅನಿಸೋದು. ಯಾವುದರಲ್ಲಿಯೂ ಆಸಕ್ತಿ ಇಲ್ಲದೇ ಹೋಗುವುದು. ನಿಶ್ಯಕ್ತಿ ಅನ್ನಿಸೋದು ಆದ್ರೆ ಅದನ್ನು ನಾವು ಖಿನ್ನತೆ ಎನ್ನುತ್ತೇವೆ ಎಂದು ಹೇಳಿದ್ದಾರೆ

ಕ್ಲಿನಿಕಲ್ ಡಿಪ್ರೆಶನ್ ಗೆ ನಾನಾ ಕಾರಣಗಳಿವೆ. ಅದರಲ್ಲಿ ಮೊದಲು ಬರೋದು ಆನುವಂಶಿಕವಾಗಿ ಬರುವ ಸಾಧ್ಯತೆ. ಮನೆಯಲ್ಲಿ ಈ ಹಿಂದೆ ಯಾರಿಗಾದರೂ ಈ ಸಮಸ್ಯೆ ಇದ್ದಲ್ಲಿ ಅದು ಆನುವಂಶಿಕವಾಗಿ ಮುಂದುವರಿಯುವ ಸಾಧ್ಯತೆ ಇರುತ್ತದೆ. ಮತ್ತೊಂದು ಕೆಲಸದ ಹಾಗೂ ಮನೆಯ ಒತ್ತಡಗಳಿಂದಾಗಿ ಬರುವ ಖಿನ್ನತೆ. ಹಾಗೆಯೇ ಜೀವನದಲ್ಲಿ ಏನಾದರೂ ಕಳೆದುಕೊಂಡಾಗಲೂ ಖಿನ್ನತೆಯನ್ನುವುದು ಆವರಿಸುತ್ತದೆ ಎಂದು ಡಾ. ಹೇಳಿದ್ದಾರೆ.

ಇನ್ನು ಖಿನ್ನತೆಯ ಲಕ್ಷಣಗಳೇನು ಅಂತ ನೋಡುವುದಾದ್ರೆ, ಈಗಾಗಲೇ ನಾವು ಮೂರು ಲಕ್ಷಣಗಳನ್ನು ನೋಡಿದ್ದೇವೆ ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು. ನಿಶ್ಯಕ್ತಿ ಅನಿಸೋದು. ನಿರಂತರ ಬೇಜಾರು ಹೀಗೆ, ಇದರ ಜೊತೆಗೆ ಯಾವುದೇ ಕೆಲಸದಲ್ಲಿಯೂ ಕೂಡ ಏಕಾಗ್ರತೆ ಇಲ್ಲದಿರುವುದು ಕೂಡ ಖಿನ್ನತೆಯ ಒಂದು ಲಕ್ಷಣ. ನೆನಪಿನ ಶಕ್ತಿ ಕಡಿಮೆ ಆಗುವುದು, ತನ್ನ ಮೇಲೆಯೇ ತನಗೆ ಒಂದು ರೀತಿಯ ಕೀಳರಿಮೆ ಹುಟ್ಟಿಕೊಳ್ಳುವುದು. ಹಸಿವು ಆಗದಿರುವುದು. ದೇಹದ ತೂಕದಲ್ಲಿ ವಿಪರೀತ ಬದಲಾವಣೆಯಾಗುತ್ತದೆ. ಒಂದೊಂದು ಬಾರಿ ವಿಪರೀತ ಅನಿಸುವಷ್ಟು ಕಡಿಮೆಯೂ ಆಗಬಹುದು. ಹೆಚ್ಚು ಕೂಡ ಆಗಬಹುದು. ಅದರ ಜೊತೆಗೆ ನಿದ್ರಾಹೀನತೆಯೂ ಕೂಡ ಖಿನ್ನತೆ ಆವರಿಸಿದ ಮನುಷ್ಯರಿಗೆ ಕಾಡುತ್ತದೆ. ಇವು ಪ್ರಮುಖವಾದ ಖಿನ್ನತೆಯ ಲಕ್ಷಣಗಳು.

ಈ ಕ್ಲಿನಿಕಲ್ ಡಿಪ್ರೆಶನ್ನಿಂದ ಬಚಾವಾಗಲು ವ್ಯಾಯಾಮ ಮಾಡುವುದು ಉತ್ತಮ ಮಾರ್ಗ. ಅದರಲ್ಲಿಯೂ ಪ್ರಾಣಾಯಾಮ ಮಾಡುವುದು ಉತ್ತಮ ಅನ್ನೋ ಸಲಹೆ ಇದೆ. ಅದರ ಜೊತೆಗೆ ತಮ್ಮನ್ನ ತಾವು ಬೆಳಕಿಗೆ ಒಗ್ಗಿಸಿಕೊಳ್ಳಬೇಕು, ಅಂದ್ರೆ ಸೂರ್ಯನ ಕಿರಣಗಳು ದೇಹ ಸ್ಪರ್ಶಿಸಬೇಕು. ಬಿಸಿಲಲ್ಲಿ ವಿಟಮಿನ್ ಡಿ3 ಸಿಗುತ್ತೆ ಖಿನ್ನತೆಯ ಹೊಡೆದು ಓಡಿಸಲು ಇದು ಅತಿ ಅವಶ್ಯಕ. ಧೂಮಪಾನ ಬಿಡಬೇಕು, ಪೌಷ್ಠಿಕಾಂಶ ಹೆಚ್ಚು ಇರುವ ಆಹಾರ ಸೇವನೆ ಮಾಡೋದ್ರಿಂದ ಕ್ಲಿನಿಕಲ್ ಡಿಪ್ರೆಶನ್ ಕೊನೆ ಹಾಡಬಹುದು.

TAGGED:What is clinical depression? What did the doctor say about this?
Share This Article
Facebook Twitter Copy Link Print
Previous Article ಪಡ್ಡೆ ಹುಡುಗರ ನಿದ್ದೆ ಕದ್ದ ಸಾರಾ ಅಣ್ಣಯ್ಯ; ಸಾರಾ ಲುಕ್ ಗೆ ಫ್ಯಾನ್ಸ್ ಫಿದಾ
Next Article ಶತಕದತ್ತ ದಾಪುಗಾಲು ಇಟ್ಟ ಈರುಳ್ಳಿ!

Popular Posts

ASTRO ಇಂದು ಬ್ರಹ್ಮ ಯೋಗ, ಇಂದ್ರ ಯೋಗ: ಹೆಚ್ಚಲಿದೆ ಈ ರಾಶಿಗಳ ಧನಸಂಪತ್ತು

4 Min Read

Shortage of human cadavers ಸರ್ಕಾರಿ ವೈದ್ಯ ಕಾಲೇಜುಗಳಿಗೆ ಸಿಗುತ್ತಿಲ್ಲ ಮನುಷ್ಯ ಮೃತದೇಹ! ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಂಟಕ

2 Min Read

Modi selfie video viral ಡಿಜಿಟಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದ ಮೋದಿ ಸೆಲ್ಫಿ ವಿಡಿಯೋ: ಒಂದೇ ರಾತ್ರಿಯಲ್ಲಿ 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆ!

2 Min Read

NEET – NTAಗೆ ಮೇಜರ್ ಸರ್ಜರಿ: 47 ಅಧಿಕಾರಿಗಳ‌ ವಜಾ

2 Min Read

You Might Also Like

ಆರೋಗ್ಯ

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read
ಆರೋಗ್ಯ

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?