newsics.com
ಅಮರಾವತಿ: ಬೈಕ್ನಲ್ಲಿ ಪಟಾಕಿ ಸಾಗಿಸುವಾಗ ಏಕಾಏಕಿ ಸ್ಫೋಟಗೊಂಡು ಓರ್ವ ಸಾವು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರೋ ಘಟನೆ ಆಂಧ್ರದ ಇಲೂರು ಜಿಲ್ಲೆಯಲ್ಲಿ ನಡೆದಿದೆ.
ರಸ್ತೆಯ ಗುಂಡಿಗೆ ಬೈಕ್ ಇಳಿದಾಗ ಈರುಳ್ಳಿ ಪಟಾಕಿ ಕೆಳಗೆ ಬಿದ್ದಿದೆ. ಪರಿಣಾಮ ಕ್ಷಣದಲ್ಲೇ ಪಾಟಾಕಿ ಸ್ಫೋಟಗೊಂಡಿದೆ.
ಪಟಾಕಿ ಬ್ಲಾಸ್ ಆದ ಪರಿಣಾಮ ಸುಧಾಕರ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೇ ರಸ್ತೆಯ ಪಕ್ಕದಲ್ಲಿ ನಿಂತುಕೊಂಡು ಮಾತಾಡುತ್ತಿದ್ದಾಗ ಆರು ಮಂದಿಗೆ ಗಾಯಗೊಂಡಿದ್ದಾರೆ.