newsics.com
ದೀಪಾವಳಿ ಹಬ್ಬಕ್ಕೆ ಊರು ಸೇರಲು ಬಯಸುವವರಿಗೆ KSRTC ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.
ಬಸ್ ಇಲ್ಲ, ಸೀಟು ಸಿಗುತ್ತಿಲ್ಲವೆಂದು ಸಪ್ಪೆ ಮೋರೆ ಹಾಕಿದ್ದ ಪ್ರಯಾಣಿಕರಿಗೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಹಿ ಸುದ್ದಿ ನೀಡಿದೆ. ಬುಧವಾರ ಬೆಳಗ್ಗೆ ವಿಧಾನಸೌಧದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹೊಸ ಬಸ್‌ಗಳಿಗೆ ಚಾಲನೆ ನೀಡಿದರು. ಈ ವೇಳೆ, ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು.
ಅದೇನೆಂದರೆ KSRTC ಕಡೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದ್ದು, ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಇಂದು ರಸ್ತೆಗಿಳಿಯಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಬಸ್ ಗಳಿಗೆ ಚಾಲನೆ ನೀಡಿದ್ದು, ಇಂದಿನಿಂದ ನೂತನ 20 ವೋಲ್ವೋ-9600 ಬಸ್ ಗಳ ಕಾರ್ಯಾಚರಣೆ ನಡೆಸಲಿವೆ.
ಹೊಸ ಐರಾವತ ಬಸ್‌ಗಳ ವಿಶೇಷತೆಗಳೇನು?
* ವಿಶಾಲ ಒಳಾಂಗಣ ಹೊಂದಿರುವ ಈ ಬಸ್ 5.6ರಷ್ಟು ಎತ್ತರವಿದೆ.
* ಏರೋಡೈನಾಮಿಕ್ ವಿನ್ಯಾಸದಿಂದ ರೂಪುಗೊಂಡಿರುವ ಈ ಬಸ್ ಇಂಧನ ದಕ್ಷತೆ ಹೊಂದಿದೆ.
* ಹೊಸ ತಂತ್ರಜ್ಞಾನ ಬಳಸಿ ಸುಧಾರಿತ ಇಂಜಿನ್ ಈ ಬಸ್‌ಗಳಗೆ ಅಳವಡಿಸಲಾಗಿದೆ. ಹೀಗಾಗಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುತ್ತದೆ.
* ವಿಂಡ್‌ಶೀಲ್ಡ್ ಗಾಜು 9.5% ರಷ್ಟು ಅಗಲವಾಗಿದೆ. ಚಾಲಕನಿಗೆ ಗೋಚರತೆ ಹೆಚ್ಚಿಸಿ ಬ್ಲೈಂಡ್ ಸ್ಪಾಟ್ ಅನ್ನು ಕಡಿಮೆ ಮಾಡುತ್ತದೆ.
* ಈ ಐರಾವತ ಮಲ್ಟಿ ಆಕ್ಸೆಲ್ ವೋಲ್ವೋ ಬಸ್‌ನಲ್ಲಿ ಉತ್ತಮ ಹವಾ ನಿಯಂತ್ರಣಾ ವ್ಯವಸ್ಥೆ ಇದೆ.
ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್: ಜಿಟಿಡಿಗೆ ಕೊಕ್, ಲಿಸ್ಟ್‌ನಲ್ಲಿರೋ ಪ್ರಮುಖರು ಯಾರ‍್ಯಾರು?
ದರ್ಶನ್ ಚಿಕಿತ್ಸೆಗಾಗಿ ಕೋರ್ಟ್ ಏನೆಲ್ಲಾ ಅವಕಾಶ ನೀಡಿದೆ?; ನಟನಿಗೆ ಕೊಟ್ಟ ಕಾಲಾವಧಿ ಎಷ್ಟು ದಿನ?