newsics.com
ಮುಂಬೈ : ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅಯೋಧ್ಯೆಯಲ್ಲಿರುವ (Ayodhya Monkey) ಕೋತಿಗಳಿಗೆ ಪ್ರತಿದಿನ ಆಹಾರ (Food) ನೀಡುವುದಕ್ಕೆ ನಟ 1 ಕೋಟಿ ರೂ. (Donates Rs 1 Crore) ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಅಯೋಧ್ಯೆಯ ಹೊರವಲಯದಲ್ಲಿರುವ ಸುರಕ್ಷಿತ ಸ್ಥಳಗಳಲ್ಲಿ ಪ್ರತಿದಿನ 1200 ಕ್ಕೂ ಹೆಚ್ಚು ಮಂಗಗಳಿಗೆ ಆಹಾರ ನೀಡುವ ಉದ್ದೇಶ ನಟ ಹೊಂದಿರುವುದಾಗಿ ವರದಿಯಾಗಿದೆ. ತಮ್ಮ ಪೋಷಕರು ಮತ್ತು ಮಾವ ರಾಜೇಶ್ ಖನ್ನಾ ಅವರ ಹೆಸರನ್ನು ಫುಡ್ ವ್ಯಾನ್‌ನಲ್ಲಿ ಬರೆಯುವ ಮೂಲಕ ಗೌರವ ಸಲ್ಲಿಸಿದ್ದಾರೆ. ಕೋತಿಗಳ ಸಂತತಿಯನ್ನು ಪೋಷಿಸುವ ಉದ್ದೇಶ ನಟನದ್ದು ಎಂದು ವರದಿಯಾಗಿದೆ.
ಅಕ್ಷಯ್ ಅವರು ದೀಪಾವಳಿ ಹಬ್ಬಕ್ಕೂ ಮೊದಲು ರಾಮನ ಭೂಮಿಯಾದ ಅಯೋಧ್ಯೆಯಲ್ಲಿ ಕೋತಿಗಳಿಗೆ ಆಹಾರಕ್ಕಾಗಿ ₹ 1 ಕೋಟಿ ದೇಣಿಗೆ ನೀಡಿದ್ದು ಮಾತ್ರವಲ್ಲದೆ ಅವರ ತಂದೆ-ತಾಯಿ ಮತ್ತು ಅವರ ಮಾವ, ದಿವಂಗತ ಹಿರಿಯ ನಟನಿಗೆ ಗೌರವ ಸಲ್ಲಿಸಿದ್ದಾರೆ. ಫುಡ್ ಫೀಡಿಂಗ್ ವ್ಯಾನ್‌ನಲ್ಲಿ ಅವರ ಹೆಸರಗಳನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಜಗತ್ಗುರು ಸ್ವಾಮಿ ರಾಘವಾಚಾರ್ಯ ಜಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಆಂಜನೇಯ ಸೇವಾ ಟ್ರಸ್ಟ್ ಈ ಕಾರ್ಯ ಮಾಡಲಿದೆ. ಆಂಜನೇಯ ಸೇವಾ ಟ್ರಸ್ಟ್‌ನ ಸಂಸ್ಥಾಪಕ-ಟ್ರಸ್ಟಿ ಪ್ರಿಯಾ ಗುಪ್ತಾ ಮಾತನಾಡಿ, ಜನರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುತ್ತೇವೆ ಎಂದರು.