newsics.com
ನವದೆಹಲಿ : ಇಂದು ಒಂದೇ ದಿನ ಬರೋಬ್ಬರಿ 70ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾ, ವಿಸ್ತಾರಾ ಮತ್ತು ಇಂಡಿಗೋದ ತಲಾ 20 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದರೆ, ಆಕಾಶ ಏರ್‌ನ ಸುಮಾರು 14 ವಿಮಾನಗಳಿಗೆ ಬೆದರಿಕೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ 11 ದಿನಗಳಲ್ಲಿ, ಭಾರತೀಯ ವಿಮಾನಯಾನ ಸಂಸ್ಥೆಗಳ ಸುಮಾರು 250 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ.
ಅಕ್ಟೋಬರ್ 24 ರಂದು ಕಾರ್ಯನಿರ್ವಹಿಸುವ ಕೆಲವು ವಿಮಾನಗಳು ಭದ್ರತಾ ಎಚ್ಚರಿಕೆಗಳು ಬಂದಿವೆ ಎಂದು ಆಕಾಶ ಏರ್ ವಕ್ತಾರರು ತಿಳಿಸಿದ್ದಾರೆ