newsics.com
ಬೆಂಗಳೂರು : ಕಾಂಗ್ರೆಸ್ನ ಚನ್ನಪಟ್ಟಣದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಇಂದು ನಾಮಪತ್ರ ಸಲ್ಲಿಸಿರುವ ಸಿ.ಪಿ.ಯೋಗೇಶ್ವರ್ ತಮ್ಮ ಆಸ್ತಿ ವಿವರವನ್ನು ಅಫೀಡವಿಟ್ನಲ್ಲಿ ಉಲ್ಲೇಖ ಮಾಡಿದ್ದಾರೆ.
ಅಫಿಡವಿಟ್ನಲ್ಲಿ ಉಲ್ಲೇಖಿಸಿರುವ ಪ್ರಕಾರ ಸಿಪಿವೈ ಬಳಿ ಒಟ್ಟು 70 ಕೋಟಿ ಆಸ್ತಿ ಇದೆ. 7 ಕೋಟಿ, 25 ಲಕ್ಷ 20 ಸಾವಿರದ 470 ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿರುವ ಯೋಗೇಶ್ವರ್, ಪತ್ನಿ ಹೆಸರಲ್ಲಿ 25 ಕೋಟಿ 35 ಲಕ್ಷ 37 ಸಾವಿರದ 740 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, 7 ಕೋಟಿ 10 ಲಕ್ಷ 80 ಸಾವಿರದ 556 ರೂಪಾಯಿಯಷ್ಟು ಚರಾಸ್ತಿ ಇದೆಯೆಂದು ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.
ಯೋಗೇಶ್ವರ್ ಹೆಸರಲ್ಲಿ 22,02,47,157 ರೂಪಾಯಿ ಮೌಲ್ಯದ ಹಾಗೂ ಪತ್ನಿ ಶೀಲಾ ಹೆಸರಲ್ಲಿ 2,14,52,740 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಇರುವ ಬಗ್ಗೆ ಅಫಿಡವಿಟ್ನಲ್ಲಿ ಉಲ್ಲೇಖವಿದೆ. ಪತ್ನಿ ಶೀಲಾ ಹೆಸರಲ್ಲಿ 6.65 ಕೋಟಿ ಮೌಲ್ಯದ ಕೃಷಿಯೇತರ ಭೂಮಿಯಿದ್ದು ಸಿ.ಪಿ.ಯೋಗೇಶ್ವರ ಹೆಸರಲ್ಲಿ 2,37,62,000 ಕೋಟಿ ಮೌಲ್ಯದ ಮತ್ತು ಪತ್ನಿ ಶೀಲಾ ಹೆಸರಲ್ಲಿ 15.45 ಕೋಟಿ ಮೌಲ್ಯದ ಮನೆಗಳಿವೆ.
ಯೋಗೇಶ್ವರ್ ಹೆಸರಲ್ಲಿ 25 ಕೋಟಿ 86 ಲಕ್ಷ 31 ಸಾವಿರದ 284 ಕೋಟಿ ರೂಪಾಯಿ ಸಾಲ ಇದ್ದು ಇನ್ನು ಪತ್ನಿ ಶೀಲಾ ಹೆಸರಿನಲ್ಲಿ 3,41,42,184 ರೂ ಸಾಲವಿದೆ.
250 ಗ್ರಾಂ ಚಿನ್ನಾಭರಣವನ್ನು ಯೋಗೇಶ್ವರ್ ಹೊಂದಿದ್ದಾರೆ. ಶೀಲಾ ಬಳಿ 1 ಕೆಜಿ 500 ಗ್ರಾಂ ಚಿನ್ನಾಭರಣ ಹಾಗೂ 20 ಕೆಜಿ ಬೆಳ್ಳಿ ಇದೆ. ಸಾರ್ವಜನಿಕರಿಂದ 1 ಕೆಜಿ ಚಿನ್ನವನ್ನು ಶೀಲಾ ಅವರು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ