newsics.com
ನವದೆಹಲಿ : ಸೌದಿ ಅರೇಬಿಯಾದ ಜೋಡಿಯೊಂದು ಕೆಂಪು ಸಮುದ್ರದ ಆಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶಿಷ್ಟ ಮದುವೆ ಪೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಸೌದಿ ಅರೇಬಿಯಾದ ಹಸನ್ ಅಬು ಅಲ್ ಓಲಾ ಮತ್ತು ಯಾಸ್ಮಿನ್ ಇಲ್ಲಿನ ಜೆಡ್ಡಾದ ಕೆಂಪು ಸಮುದ್ರದ ಆಳದಲ್ಲಿ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದು, ಇದು ಸೌದಿ ಅರೇಬಿಯಾದಲ್ಲಿ ಸಮುದ್ರದಾಳದಲ್ಲಿ ನಡೆದ ಮೊದಲ ಮದುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮದುವೆಯ ಸುದ್ದಿ ಸಖತ್ ವೈರಲ್ ಆಗುತ್ತಿದ್ದು, ಇದೊಂದು ಮರೆಯಲಾಗದ ಅನುಭವ ಎಂದು ಮದುಮಗ ಹಸನ್ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಹಸನ್ ಮತ್ತು ಯಾಸ್ಮಿನ್ ಸ್ಕೂಬಾ ಡೈವಿಂಗ್ ಮತ್ತು ಸಾಹಸ ಕ್ರೀಡೆಗಳಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದು, ಇದೇ ಕಾರಣದಿಂದ ಸಮುದ್ರದಾಳದಲ್ಲಿ ಮದುವೆಯಾಬೇಕೆಂದು ಬಯಸಿದ್ದರು. ಇದೀಗ ಇವರು ತಮ್ಮಿಚ್ಛೆಯಂತೆ ಆಳ ಸಮುದ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ಯಾಪ್ಟನ್ ಫೈಸಲ್ ಫ್ಲಾಂಬನ್ ನೇತೃತ್ವದ ಸ್ಥಳೀಯ ಡೈವರ್‌ಗಳ ಗುಂಪು ಈ ವಿಶಿಷ್ಟ ವಿವಾಹವನ್ನು ಆಯೋಜನೆ ಮಾಡಿತ್ತು.