newsics.com
ನವದೆಹಲಿ: ರಷ್ಯಾ ಮೂಲದ ಬೆಡಗಿ ಮದುವೆಯಾಗಲು ತಯಾರಿ ಮಾಡುತ್ತಿದ್ದಾರೆ. ಭಾರತೀಯ ವರನ ಮಾತ್ರ ಮದುವೆಯಾಗಲು ಬಯಸಿದ್ದಾರೆ. ಇದರ ಜತೆ ನಾಲ್ಕು ಕಂಡೀಷನ್ ಕೂಡ ಹಾಕಿದ್ದಾರೆ.
ರಷ್ಯಾ ಬೆಡಗಿ ಹೆಸರು ನೈಲ್. ಸದ್ಯ ದುಬೈನಲ್ಲಿ ನೆಲೆಸಿದ್ದಾಳೆ. ಭಾರತೀಯ ಸಂಸ್ಕೃತಿ, ಪದ್ಧತಿಗಳಿಗೆ ಮಾರು ಹೋಗಿರುವ ನೈಲ್ ಇದೀಗ ಭಾರತೀಯ ಹುಡುಗನನ್ನೇ ಮದುವೆಯಾಗಲು ಬಯಸಿದ್ದಾಳೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಅಕ್ಟೋಬರ್ 18ಕ್ಕೆ ಈಕೆ ಭಾರತೀಯ ವರನ ಮದುವೆಯಾಗಲು ಬಯಸಿರುವ ವಿಡಿಯೋ ಹಂಚಿಕೊಂಡಿದ್ದಾಳೆ. ಹೀಗಾಗಿ ತಡ ಮಾಡದೇ ಅಪ್ಲೈ ಮಾಡಿದರೆ ರಷ್ಯಾ ಬೆಡಗಿಯ ಪತಿಯಾಗುವ ಸಾಧ್ಯತೆಗಳಿವೆ.
ನನ್ನ ಮದುವೆಯಾಗುವ ಹುಡುಗನಿಗೆ ಮ್ಯೂಸಿಕ್ ಕೇಳುವ ಹವ್ಯಾಸ ಆಸಕ್ತಿ ಇರಬೇಕು. ಡ್ಯಾನ್ಸ್ ಇಷ್ಟಪಡಬೇಕು, ಸಂದರ್ಭಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುವಂತಿರಬೇಕು. ಪ್ರಯಾಣ ಇಷ್ಟಪಡಬೇಕು, ಈ ಮೂಲಕ ಜತೆಯಾಗಿ ಟ್ರಿಪ್ ಮಾಡಲು ಆಸಕ್ತಿ ಇರಬೇಕು. ರಷ್ಯಾ ಮೇಲೆ ಪ್ರೀತಿ ಇರಲಿ, ನನ್ನನ್ನೂ ಪ್ರೀತಿಸಬೇಕು ಎಂದು ಕಂಡೀಷನ್ ಹಾಕಿದ್ದಾಳೆ. ಇದರ ಜತೆಗೆ ಇನ್ನೆರಡು ಕ್ವಾಲಿಟಿ ಇರಬೇಕು ಎಂದಿದ್ದಾಳೆ. ಒಂದು ಮದುವೆಯಾಗುವ ಹುಡುಗ 6 ಅಡಿ ಎತ್ತರ ಇರಬೇಕು, ಹಸಿರು ಕಣ್ಣು ಹೊಂದಿರಬೇಕು ಎಂದಿದ್ದಾಳೆ.
https://www.instagram.com/reel/DBQZ-Nsz23i/?igsh=bWIwNmtsbzhiMTh4