newsics.com
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯರನ್ನು ಮುಡಾ ಹಗರಣದಲ್ಲಿ ಇಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಮೈಸೂರಿನ ಮುಡಾ ಕಚೇರಿ ಹಾಗೂ ಇತರೆಡೆಗಳಲ್ಲಿ ದಾಳಿ ನಡೆಸುವ ಮೂಲಕ ಇಡಿ ತನಿಖೆ ಚುರುಕುಗೊಳಿಸಿದೆ. 14 ನಿವೇಶಗಳನ್ನು ಸಿಎಂ ಪತ್ನಿ ಮುಡಾಗೆ ಹಿಂದಿರುಗಿಸಿದ್ದರೂ ವಿಚಾರಣೆ ಅನಿವಾರ್ಯ ಎನ್ನಲಾಗಿದೆ. ಇಡಿ ಇಕ್ಕಳದಲ್ಲಿ ಸಿಎಂ ಸಿದ್ದು ಪುತ್ರ ಯತೀಂದ್ರ ಸಿದ್ದರಾಮಯ್ಯ ಸಿಲುಕುವ ಸಾಧ್ಯತೆಗಳಿದೆ.
ನಿನ್ನೆ ಮೈಸೂರಿನ ಮುಡಾ ಕಚೇರಿ ಹಾಗೂ ಬೆಂಗಳೂರಿನ ಕೆಂಗೇರಿ ಉಪನಗರದ ಜಮೀನಿನ ಮೂಲ ಮಾಲೀಕ ದೇವರಾಜು ಮನೆಗೆ ಭೇಟಿ ಕೊಟ್ಟಿರುವ ಇಡಿ ಅಧಿಕಾರಿಗಳು ಇಡೀ ದಿನ ತಲಾಶ್ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೂ ಇಡಿ ಕಂಟಕ ಎದುರಾಗಲಿದೆ. ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.