newsics.com
ಚಿತ್ರನಟಿಯರು, ಮಾಡೆಲ್ಗಳು ಎಂದರೆ ಹಾಗೇನೇ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡು ಆಗಾಗ ಸರಿಪಡಿಸಿಕೊಳ್ಳುವುದನ್ನು ನಾವು ನೋಡಬಹುದು. ವಿಚಿತ್ರ ಡ್ರೆಸ್ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದೂ, ಎಡವಿ ಬೀಳುವುದೂ ಇದೆ. ಅಥವಾ ಅವರ ಡ್ರೆಸ್ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದೂ ಮಾಮೂಲಿ.
ಉದ್ದನೆಯ ಡ್ರೆಸ್ ಕಾಲಿಗೆ ಸಿಕ್ಕು ಎಡವಿ ಬೀಳುವ ಹಲವು ನಟಿಯರ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ.
ಮಾಡೆಲ್ಗಳು ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು ಎನ್ನುವ ಪರಿಕಲ್ಪನೆ ಇದೆ. ಇದೇ ಕಾರಣಕ್ಕೆ ಸೈಜ್ ಮೆಂಟೇನ್ ಮಾಡಲು ರೂಪದರ್ಶಿಗಳು ಮಾಡುವ ಸರ್ಕಸ್ ಒಂದೆರಡಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಪ್ಲಸ್ ಸೈಜ್ ಮಾಡೆಲ್ಗಳ ರ‌್ಯಾಂಪ್ ವಾಕ್, ಫ್ಯಾಷನ್ ಷೋಗಳು ಕೂಡ ನಡೆಯುತ್ತವೆ.
ಮಾಡೆಲ್ ಆಗಲು ಸೈಜ್ ಮುಖ್ಯವಲ್ಲ ಎಂದು ಧೈರ್ಯ, ವಿಶ್ವಾಸ ತುಂಬುವ ಇಂಥ ಷೋಗಳಿಗೆ ತುಂಬಾ ರೆಸ್ಪಾನ್ಸ್ ಇದೆ. ಆದರೆ ದುರದೃಷ್ಟವಶಾತ್ ಈ ಷೋನಲ್ಲಿ ಮಾಡೆಲ್‌ವೊಬ್ಬರು ಕ್ಯಾಟ್ ವಾಕ್ ಶುರು ಮಾಡುತ್ತಿದ್ದಾಗಲೇ ಕಾಲಿಗೆ ಬಟ್ಟೆ ತಗುಲಿ ಬಿದ್ದುಬಿಟ್ಟಿದ್ದಾರೆ. ಏನೂ ಆಗಲಿಲ್ಲ ಎನ್ನುವಂತೆ ನಗುತ್ತಲೇ ಇದ್ದ ಈ ರೂಪದರ್ಶಿ ಏಳಲು ಟ್ರೈ ಮಾಡಿದ್ದಾರೆ. ಪುನಃ ತಮ್ಮ ಷೋ ಮುಂದುವರಿಸಲು ಯತ್ನಿಸಿದ್ದಾರೆ. ಆದರೆ ಅವರಿಗೆ ತುಂಬಾ ಏಟಾಗಿದ್ದರಿಂದಲೋ ಏನೋ ಏಳಲು ಸಾಧ್ಯವಾಗಲಿಲ್ಲ. ಕೂಡಲೇ ಉಳಿದ ರೂಪದರ್ಶಿಗಳು ಓಡಿ ಬಂದು ಅವರನ್ನು ಏಳಿಸಿದ್ದಾರೆ. ಈ ವಿಡಿಯೋಗೆ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.
https://www.instagram.com/reel/DBQhy6BML_v/?utm_source=ig_web_button_share_sheet
ಹುಡುಗಿಯರೇ ಇದೆಷ್ಟು ಡೇಂಜರ್ ಗೊತ್ತಾ?; ಗೊತ್ತಿಲ್ಲದವರ ಜೊತೆ ಡೇಟಿಂಗ್ ಮಾಡೋ ಮುನ್ನ ಹುಷಾರ್!