newsics.com
ಬೆಂಗಳೂರು : ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಕುರಿತು ನೆಗೆಟಿವ್ ವಿಮರ್ಶೆ ಮಾಡಿದ್ದ ಕನ್ನಡದ ರೀಲ್ಸ್ ಸ್ಟಾರ್ ಸುಧಾಕರ್ ಅರೆಸ್ಟ್ ಆಗಿದ್ದಾರೆ.
ನೆಗೆಟಿವ್ ವಿಮರ್ಶೆ ಮಾಡಿದ್ದ ಸುಧಾಕರ್ ವಿರುದ್ಧ ಧ್ರುವ ಸರ್ಜಾ ಫ್ಯಾನ್ಸ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ತಾನು ಮಾಡಿದ್ದ ವಿಡಿಯೋ ಡಿಲೀಟ್ ಮಾಡಿಸಿದ್ದರು. ಆದರೀಗ, ಮಾದನಾಯಕನಹಳ್ಳಿ ಪೊಲೀಸರು ಹಲ್ಲೆ ಕೇಸ್ವೊಂದರಲ್ಲಿ ರೀಲ್ಸ್ ಸ್ಟಾರ್ ಸುಧಾಕರ್ ಅರೆಸ್ಟ್ ಮಾಡಿದ್ದಾರೆ.
ಮಾರ್ಟಿನ್ ಸಿನಿಮಾದ ನೆಗೆಟಿವ್ ವಿಮರ್ಶೆ ಸಂಬಂಧ ಧ್ರುವ ಫ್ಯಾನ್ಸ್ ದೂರು ನೀಡಿದ ಕಾರಣಕ್ಕೆ ಠಾಣೆಗೆ ಕರೆಸಿದ್ದ ಪೊಲೀಸರು ಕ್ಷಮೆ ಕೇಳಿಸಿ ವಿಡಿಯೋ ಡಿಲೀಟ್ ಮಾಡಿಸಿದ್ದರು. ಈಗ ಹಲ್ಲೆ ಕೇಸಲ್ಲಿ ಸುಧಾಕರ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.