newsics.com
ಬಾಬಾ ಸಿದ್ದಿಕಿಯನ್ನು ಏಕೆ ಹತ್ಯೆ ಮಾಡಲಾಯಿತು ಮತ್ತು ಅದಕ್ಕೆ ಕಾರಣವೇನು ಎಂಬ ಬಗ್ಗೆ ಇನ್ನೂ ಸಸ್ಪೆನ್ಸ್ ಇದೆ. ಆದರೆ ಇದೀಗ ಪೊಲೀಸರ ಆರಂಭಿಕ ತನಿಖೆಯಲ್ಲಿ ದೊಡ್ಡ ಸಂಗತಿಯೊಂದು ಬೆಳಕಿಗೆ ಬಂದಿದೆ.
ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಂಪರ್ಕವನ್ನು ಮುಂಬೈ ಪೊಲೀಸರು ಪತ್ತೆ ಮಾಡಿದ್ದಾರೆ. ಹೌದು, ಸಲ್ಮಾನ್ ಖಾನ್ ಸೇರಿದಂತೆ ಇಡೀ ಮುಂಬೈ ಮತ್ತು ಮಾಯಾನಗರದಲ್ಲಿ ಭಯೋತ್ಪಾದನೆ ಸೃಷ್ಟಿಸುವುದು ಬಾಬಾ ಸಿದ್ದಿಕಿ ಹತ್ಯೆಯ ಉದ್ದೇಶವಾಗಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜತೆಗೆ ಭೂಗತ ಜಗತ್ತು ಹಾಗೂ ದಾವೂದ್ ಇಬ್ರಾಹಿಂಗೂ ಸಂದೇಶ ರವಾನೆಯಾಗಬೇಕಿತ್ತು.
ಈ ಹತ್ಯೆಗೂ ದಾವೂದ್ ನಂಟು ಕೂಡ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಇನ್ನು ಸಿದ್ದಿಕಿ ಹಂತಕರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಶಸ್ತ್ರಾಸ್ತ್ರ ಪೂರೈಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಶುಭಂ ಲೋಂಕರ್ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ.