newsics.com
ಬೆಳಗಾವಿ : ಇಲ್ಲೊಬ್ಬ ಗ್ರಾ.ಪಂ ಸದಸ್ಯೆ ತನ್ನ ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ತನ್ನ ಗ್ರಾಮದಲ್ಲಿ ಗೃಹಲಕ್ಷ್ಮೀ ಹಾಗೂ ಗ್ರಾ.ಪಂ ಸದಸ್ಯೆಗೆ ನೀಡುವ ಧನ ಸಹಾಯ ಕೂಡಿಸಿ ಗ್ರಂಥಾಲಯ ನಿರ್ಮಾಣ ಮಾಡಿ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ, ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.
ಗ್ರಂಥಾಲಯಕ್ಕೆ ಒಟ್ಟು ಒಂದೂವರೆ ಲಕ್ಷ ಖರ್ಚು ಮಾಡಲಾಗಿದೆ. ತಮ್ಮ ಊರಿನ ಮಕ್ಕಳು ಓದುವುದಕ್ಕಾಗಿಯೇ ಬೆಂಗಳೂರು, ಧಾರವಾಡ, ಬಿಜಾಪುರಕ್ಕೆ ಹೋಗುತ್ತಾರೆ.ಅಲ್ಲಿ ಅವರ ತರಬೇತಿಗೆ ತಿಂಗಳು ತಿಂಗಳು ಹಣದ ಸಮಸ್ಯೆ ಆಗ್ತಿತ್ತು.ಊಟ, ಆರೋಗ್ಯದ ಸಮಸ್ಯೆ ಕೂಡ ಕಾಡ್ತಿದ್ದವು. ಹೀಗಾಗಿ ಈ ಮಹಿಳೆ ಮಕ್ಕಳ ಭಾವಿಷ್ಯಕ್ಕಾಗಿ ಈ ನಿರ್ಧಾರ ಮಾಡಿದರೆ.