newsics.com
ಬೆಂಗಳೂರು: ಮಹಿಳೆಯರ ಕುರಿತಾದ ಕೀಳು ಹೇಳಿಕೆ ಹಾಗೂ ಸ್ಪರ್ಧಿಗಳನ್ನು ಕೆಟ್ಟದಾಗಿ ನಡೆಸಿಕೊಂಡ ಹಿನ್ನೆಲೆಯಲ್ಲಿ ‘ಬಿಗ್ ಬಾಸ್’ ಆಯೋಜಕರಿಗೆ ಕುಂಬಳಗೋಡು ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.
ವಿಚಾರಣೆಗೆ ಹಾಜರಾಗವಂತೆ ‘ಬಿಗ್ ಬಾಸ್’ ಆಯೋಜಕರಿಗೆ ನೋಟಿಸ್ ನೀಡಲಾಗಿದೆ. ಸ್ವರ್ಗ, ನರಕ ವಿಚಾರವಾಗಿ ಮಹಿಳೆಯರ ಕುರಿತ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ದೂರು ದಾಖಲಿಸಿದ್ದು, ಮಹಿಳಾ ಆಯೋಗದ ದೂರು ಆಧರಿಸಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಇನ್ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ‘ಬಿಗ್ ಬಾಸ್’ ಸೆಟ್ಗೆ ತೆರಳಿ ನೋಟಿಸ್ ನೀಡಿದ್ದಾರೆ. ಸ್ವರ್ಗ ನರಕ ವಿಚಾರವಾಗಿ ನಡೆದ ಸಂಭಾಷಣೆಯ ಎಡಿಟ್ ಮಾಡದ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ನಿರ್ಲಕ್ಷಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.
ಸಿದ್ದಿಕಿ ಹತ್ಯೆ ಹಿಂದೆ ಬಿಷ್ಣೋಯ್ ಗ್ಯಾಂಗ್ ಕೈವಾಡ – ಬೆಚ್ಚಿಬೀಳಿಸುವ ರಹಸ್ಯ ಬಯಲು