newsics.com
ಕನ್ನಡದ ಬಿಗ್ ಬಾಸ್ 2 ವಾರಗಳು ಕಳೆದಿವೆ. ಈಗಾಗಲೇ ಸ್ಪರ್ಧಿಗಳ ಮಧ್ಯೆ ಉಳಿವಿಗಾಗಿ ಜಟಾಪಟಿ ನಡೆಯುತ್ತದೆ. 16 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಈ ವಾರ ಬಹುತೇಕರು ನಾಮಿನೇಟ್ ಆಗಿದ್ದು, ಹೊರ ಹೋಗುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.
ಈ ವಾರ ಕೆಲ ನಿಯಮಗಳನ್ನು ಬ್ರೇಕ್ ಮಾಡಿ ಎಲ್ಲರೂ ನಾಮಿನೇಟ್ ಆದರು. ಬಿಗ್ ಬಾಸ್ ಕೆಂಗಣ್ಣಿಗೆ ಎಲ್ಲರೂ ಗುರಿಯಾದರು. ಆ ನಂತರ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಲು ಕೆಲವು ಅವಕಾಶ ನೀಡಿದರು ಬಿಗ್ ಬಾಸ್. ಸದ್ಯ ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್, ರಂಜಿತ್, ತ್ರಿವಿಕ್ರಮ್, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸಾ, ಅನುಷಾ ರೈ ನಾಮಿನೇಷನ್ ಲಿಸ್ಟ್‌ನಲ್ಲಿ ಇದ್ದಾರೆ. ಹಾಗಾದರೆ ಇವರ ಪೈಕಿ ಹೊರ ಹೋಗುವವರು ಯಾರು? ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದರೆ ಭಾನುವಾರದ ಕಿಚ್ಚನ ಪಂಚಾಯಿತಿ ಎಪಿಸೋಡ್ ಪ್ರಸಾರ ಆಗುವವರೆಗೂ ಕಾಯಲೇಬೇಕು.