newsics.com
ಭಾರತವು ಸಂಸ್ಕೃತಿಗಳ ನಾಡು. ಇಲ್ಲಿ ಪ್ರತಿಯೊಂದು ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿನ ಸಂಸ್ಕೃತಿಗೆ ಮಾರುಹೋಗದವರಿಲ್ಲ. ಆದ್ದರಿಂದ ಭಾರತವನ್ನು ಸಂಸ್ಕೃತಿಗಳ ತವರು ಎಂದು ಕರೆಯಲಾಗುತ್ತದೆ.
ವಿಜಯದಶಮಿ ದಿನದಂದು ಬನ್ನಿ ಮರವನ್ನು ಶುಭದ ಸಂಕೇತವಾಗಿ ಪೂಜಿಸಲಾಗುತ್ತದೆ. ಬನ್ನಿ ಮರಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಬನ್ನಿ ಮರವನ್ನು ಶಮೀ ವೃಕ್ಷ ಎಂದು ಮತ್ತು ಅದರ ಎಲೆಗಳನ್ನು ಗಟ್ಟಿ ಚಿನ್ನ ಎಂದು ಕರೆಯುವ ಪ್ರತೀತಿ ಇದೆ.
ಬನ್ನಿ ಮರಕ್ಕೆ ಉತ್ತರ ಕರ್ನಾಟಕದ ಭಾಗದಲ್ಲಿ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ವಿಜಯ ದಶಮಿಯಂದು ಸಂಜೆಯಾಗುತ್ತಿದ್ದಂತೆ ಬನ್ನಿ ಮರದ ಎಲೆಗಳನ್ನು ತಂದು ಪೂಜಿಸಲಾಗುತ್ತದೆ. ನಂತರ ಬನ್ನಿ ಮರದ ಎಲೆಗಳನ್ನು ಚಿನ್ನದ ಗಟ್ಟಿ ಎಂದು ಕೈಯಲ್ಲಿ ಹಿಡಿದು ಮನೆ-ಮನೆಗೆ ತೆರಳಿ ಗಟ್ಟಿಯನ್ನು ಪರಸ್ಪರ ಕೊಟ್ಟು- ತೆಗೆದುಕೊಂಡು ನಾವು ನೀವು ಬಂಗಾರದ ಹಾಗೆ ಇರೋಣ ಎಂದು ಶುಭಾಶಯಗಳನ್ನು ತಿಳಿಸುತ್ತಾರೆ.
.