newsics.com
ಬೆಂಗಳೂರು: ಬೆಂಗಳೂರಿನ ಸ್ಯಾಟ್ಲೈಟ್ ನಿಲ್ದಾಣದ ಮೇಲ್ವಾವಣಿಗೆ ಅಳವಡಿಕೆ ಮಾಡಲಾದ ಶೀಟ್ ಗಳು ಈಗಲೋ ಆಗಲೋ ಕಳಚಿ ಬೀಳೊ ಆತಂಕ ಎದುರಾಗಿದೆ.
ಮೈಸೂರು ರಸ್ತೆಯ ಸ್ಯಾಟ್ಲೈಟ್ ಬಸ್ ನಿಲ್ದಾಣ ಶಿಥಿಲಾವಸ್ಥೆಗೆ ತಲುಪಿದ್ದು ಯಾವಾಗ ಏನಾಗುತ್ತೆ ಎಂಬ ಆತಂಕ ಹೆಚ್ಚಾಗಿದೆ. ಈ ಬಸ್ ನಿಲ್ದಾಣವೇನೋ ನೋಡಲು ಹೈಟೆಕ್ ಆಗಿದೆ. ಆದರೆ ಇಲ್ಲಿನ ಮೇಲ್ವಾವಣಿಗೆ ಅಳವಡಿಕೆ ಮಾಡಲಾದ ಶೀಟ್ ಗಳು ಹಾಳಾಗಿವೆ. ಪ್ರತಿನಿತ್ಯ ಸಾವಿರಾರು ಜನ ಓಡಾಡೊ ಜಾಗವಿದು. ಇಲ್ಲಿ ಏನಾದ್ರು ಆದರೆ ಯಾರು ಹೊಣೆ. ಇಲಾಖೆ ಅಧಿಕಾರಿಗಳು ಜವಾಬ್ದಾರಿ ತಗೆದುಕೊಳ್ಳಬೇಕು. ಮಳೆ ಗಾಳಿ ಬಂದ್ರೆ ಯಾವ ಸಂದರ್ಭದಲ್ಲಿ ಏನಾಗುತ್ತೆ ಅಂತ ಭಯ ಆಗುತ್ತೆ. ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕು ಅಂತ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.