newsics.com
ಹರಿಯಾಣದಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿ ರಾಹುಲ್ ಗಾಂಧಿ ಅವರ ಜಿಲೇಬಿ ಹೇಳಿಕೆಯನ್ನು ತೀವ್ ಚರ್ಚೆಗೆ ಗ್ರಾಸ ಮಾಡಿದೆ. ಹೀಗಾಗಿ ಹರಿಯಾಣ ರಾಜಕೀಯದಲ್ಲಿ ಈಗ ಜಿಲೇಬಿ ಚರ್ಚೆ ತೀವ್ರಗೊಂಡಿದೆ.
ಅಷ್ಟೇ ಅಲ್ಲ, ಬಿಜೆಪಿ ವಿಜಯೋತ್ಸವದಲ್ಲಿ ನೂರು ಕೆಜಿ ಜಿಲೇಬಿಯನ್ನೇ ಹಂಚುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಣಕಿಸಿದೆ.
ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರ ವೇಳೆ ಗೊಹಾನದ ಪ್ರಸಿದ್ಧ ಮಾತುರಾಮ್ ಜಿಲೇಬಿಗಳನ್ನು ತಿಂದು ವೇದಿಕೆ ಮೇಲೆ ರಾಹುಲ್ ಗಾಂಧಿ, ಜಿಲೇಬಿ ಕಾರ್ಖಾನೆಗಳ ಸ್ಥಾಪನೆ, ಉದ್ಯೋಗಾವಕಾಶ ಕಲ್ಪಿಸಿ ದೇಶ ವಿದೇಶಗಳಿಗೆ ರಫ್ತು ಮಾಡುವ ಕುರಿತು ಮಾತನಾಡಿದ್ದರು.

ಬಿಜೆಪಿ ಇದನ್ನೇ ಚರ್ಚೆಯ ವಿಷಯವನ್ನಾಗಿ ಮಾಡಿಕೊಂಡು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ರಾಹುಲ್ ಜಿಲೇಬಿ ಹೇಳಿಕೆಯನ್ನು ಪ್ರಧಾನಿ ಮೋದಿ ಕೂಡ ವ್ಯಂಗ್ಯವಾಡಿದ್ದರು. ಜಿಲೇಬಿ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿವೆ. ಜಿಲೇಬಿಯನ್ನು ಗದ್ದೆಯಲ್ಲಿ ಬೆಳೆಯಂತೆ ಬೆಳೆದು ತೋರಿಸಲಾಗುತ್ತಿದೆ. ಜಿಲೇಬಿಯ ಬೀಜಗಳು ಸಿದ್ಧವಾಗಿವೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ. ಈಗ ಹೊಲಗಳಲ್ಲಿ ಜಿಲೇಬಿ ಬೆಳೆಯಲಾಗುವುದು ಎಂದು ಕುಚೋದ್ಯ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕನನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ನಂತರ ಕಾಂಗ್ರೆಸ್ ಕೂಡ ಜಲೇಬಿಯನ್ನು ಯಂತ್ರಗಳು ಮತ್ತು ಅದರ ಕಾರ್ಖಾನೆಯಿಂದ ತಯಾರಿಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸೇಡು ತೀರಿಸಿಕೊಂಡಿತ್ತು. ಆದರೆ ಈಗ ಹರಿಯಾಣ ವಿಧಾನಸಭೆ ಫಲಿತಾಂಶ ಬೆನ್ನಲ್ಲೇ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್‌ನ ಜಿಲೇಬಿಯ ರುಚಿ ಕಳೆಗುಂದಿದೆ.
ಎಕ್ಸಿಟ್ ಪೋಲ್‌ಗಳು ಮೊದಲು ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಸ್ಥಿತಿಯಲ್ಲಿದೆ ಎಂದು ಹೇಳಿದ್ದವು. ಆದರೆ ಮಂಗಳವಾರ ಬೆಳಗ್ಗೆ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ, ಪಕ್ಷವು ಉತ್ತಮ ಮುನ್ನಡೆ ಸಾಧಿಸಿತ್ತು. ಆದರೆ ಮತ ಎಣಿಕೆ ಮುಂದುವರಿದಂತೆ ಬಿಜೆಪಿ ತೀವ್ರ ಪೈಪೋಟಿ ನೀಡಿತ್ತು. ಅಲ್ಲದೆ ಸ್ಪಷ್ಟ ಬಹುಮತ ಸಾಧಿಸಿದ್ದು ರಾಹುಲ್ ಗಾಂಧಿಯ ಜಿಲೇಜಿ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ.
ಏನಿದು ಜಿಲೇಬಿ ಚರ್ಚೆ?:
ಹರಿಯಾಣದಲ್ಲಿ ಚುನಾವಣಾ ಪ್ರಚಾರ ವೇಳೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಗೊಹಾನದ ಪ್ರಸಿದ್ಧ ಜಿಲೇಬಿಯನ್ನು ತಿಂದು ಅದರ ರುಚಿಯನ್ನು ಪ್ರಶಂಸಿಸಿದ್ದರು. ಈ ವೇಳೆ ಅವರು ಹೇಳಿದ್ದು, ನಾನು ಕಾರಿನಲ್ಲಿ ಜಿಲೇಬಿ ಸವಿದು, ನನ್ನ ಜೀವನದ ಅತ್ಯುತ್ತಮ ಜಿಲೇಬಿ ತಿಂದಿದ್ದೇನೆ ಎಂದು ನನ್ನ ಸಹೋದರಿ ಪ್ರಿಯಾಂಕಾಗೆ ಸಂದೇಶ ಕಳುಹಿಸಿದ್ದೆ. ನಿನಗೂ ಒಂದು ಬಾಕ್ಸ್ ಜಿಲೇಬಿ ತರುತ್ತಿದ್ದೇನೆ. ದೀಪೇಂದ್ರ ಮತ್ತು ಬಜರಂಗ್ ಪುನಿಯಾ ಅವರಿಗೂ ಈ ಜಿಲೇಬಿ ಬಗ್ಗೆ ಭಾರತ ಸೇರಿದಂತೆ ಇಡೀ ಪ್ರಪಂಚಕ್ಕೆ ತಿಳಿಯಬೇಕು ಎಂದು ಹೇಳಿದೆ ಎಂದು ರಾಹುಲ್ ಹೇಳಿದ್ದರು.
https://x.com/rahul_agricos/status/1842038366810079568?t=NPBa_exWe654CTbYpMbIag&s=19