newsics.com
ಬೆಂಗಳೂರು: ಗಾಂಧಿ ಜಯಂತಿ ಕಾರ್ಯಕ್ರಮ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತನಿಂದ ರಾಷ್ಟ್ರಧ್ವಜಕ್ಕೆ ಅವಮಾನವಾದ ಘಟನೆ ಬುಧವಾರ ನಡೆದಿದೆ.
ಬುಧವಾರ ಬೆಳಗ್ಗೆ ಗಾಂಧಿ ಜಯಂತಿ ಅಂಗವಾಗಿ ಸಿಎಂ ಸಿದ್ದರಾಮಯ್ಯ ಅವರು ಶ್ರದ್ಧಾಂಜಲಿ ಅರ್ಪಿಸಲು ಆಗಮಿಸಿದ್ದಾಗ ಈ ಘಟನೆ ನಡೆದಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಕಾರ್ಯಕರ್ತನೊಬ್ಬ ಕೈನಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡೇ ಮುಖ್ಯಮಂತ್ರಿಯವರ ಬೂಟು ತೆಗೆಯಲು ಸಹಾಯ ಮಾಡಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಅವರ ಬೂಟು ರಾಷ್ಟ್ರಧ್ವಜಕ್ಕೆ ತಾಗಿದೆ.
ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಶೂಗಳನ್ನು ತೆಗೆಯುವುದನ್ನು ಮುಂದುವರಿಸಿದ್ದ ಕಾರ್ಯಕರ್ತನಿಂದ ಧ್ವಜ ಕಿತ್ತುಕೊಂಡ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
https://twitter.com/i/status/1841372333774442909
ಕನ್ನಡತಿ ಧಾರಾವಾಹಿ ನಟಿ ಜತೆ ಲಿವಿಂಗ್ ರಿಲೇಷನ್ಶಿಪ್: ಮದುವೆಗೆ ನಿರಾಕರಣೆ, ಯುವಕ ಆತ್ಮಹತ್ಯೆ