newsics.com
ಟೆಲ್ ಅವೀವ್: ಇಸ್ರೇಲ್ ನ ಸೇನಾ ನೆಲೆ ಮತ್ತು ಮೊಸಾದ್ ಪ್ರಧಾನ ಕಚೇರಿಯನ್ನು ಇರಾನ್ ಕ್ಷಿಪಣಿಗಳು ಟಾರ್ಗೆಟ್ ಮಾಡಿ ಉಡಾಯಿಸಿದೆ ಎಂದು ಇರಾನ್ನ ಉನ್ನತ ಮಿಲಿಟರಿ ಅಧಿಕಾರಿ ಮೊಹಮ್ಮದ್ ಬಘೇರಿಯನ್ನು ಉಲ್ಲೇಖಿಸಿ ಇರಾನಿನ ಮಾಧ್ಯಮವೊಂದು ಹೇಳಿಕೊಂಡಿದೆ.
ನೆವ್ಟಿಮ್ ವಾಯುನೆಲೆ ಇಸ್ರೇಲ್ನ F-35 ಫೈಟರ್ ಜೆಟ್ಗಳನ್ನು ಹೊಂದಿದೆ, ಟೆಹ್ರಾನ್ ಟೈಮ್ಸ್ನ ವರದಿಯ ಪ್ರಕಾರ, ಸೆಪ್ಟೆಂಬರ್ 27 ರಂದು ಬೈರುತ್ನಲ್ಲಿ ಬಾಂಬ್ ದಾಳಿ ಮಾಡಿದ ಫೈಟರ್ ಜೆಟ್ಗಳು ಈ ಮಿಲಿಟರಿ ವಾಯುನೆಲೆಯಿಂದ ಹಾರಿದವು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇತ್ತ US ಮಿಲಿಟರಿಯ ಸೆಂಟ್ರಲ್ ಕಮಾಂಡ್ F-16 ಮತ್ತು F-15E ಫೈಟರ್ ಏರ್ಕ್ರಾಫ್ಟ್ಗಳ ಮೂರು ಹೆಚ್ಚುವರಿ ಸ್ಕ್ವಾಡ್ರನ್ಗಳು ಮತ್ತು A-10 ದಾಳಿ ವಿಮಾನಗಳು ಪಶ್ಚಿಮ ಏಷ್ಯಾಕ್ಕೆ ಆಗಮಿಸುತ್ತಿವೆ ಮತ್ತು ಈಗಾಗಲೇ ಒಂದು ಸ್ಕ್ವಾಡ್ರನ್ ಆಗಮಿಸಿದೆ ಎಂದು ಘೋಷಿಸಿತು.
ಶ್ವೇತಭವನದ ಪ್ರಕಾರ, ಅಧ್ಯಕ್ಷ ಬಿಡೆನ್ ಇರಾನ್ ದಾಳಿಗಳ ವಿರುದ್ಧ ಇಸ್ರೇಲ್ನ ರಕ್ಷಣೆಗೆ ಸಹಾಯ ಮಾಡಲು ಇಸ್ರೇಲ್ ನ್ನು ಗುರಿಯಾಗಿಸುವ ಕ್ಷಿಪಣಿಗಳನ್ನು ಹೊಡೆದುರುಳಿಸಲು US ಮಿಲಿಟರಿಗೆ ನಿರ್ದೇಶಿಸಿದ್ದಾರೆ.