newsics.com
ಕಲಬುರಗಿ: ಹಾಸಿಗೆ ಸುಖ ನೀಡಲು ನಿರಾಕರಿಸಿದ ಪತ್ನಿಯನ್ನು ಹಗ್ಗದಿಂದ ಉಸಿರುಗಟ್ಟಿಸಿ ಬಳಿಕ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಬಟಗೇರಾ ಗ್ರಾಮದ ನಾಗಮ್ಮಾ (42) ಹತ್ಯೆಯಾದ ಮಹಿಳೆ. ಕಳೆದ ರಾತ್ರಿ ಎರಡು ಬಾರಿ ಲೈಂಗಿಕ ಸಂಪರ್ಕಕ್ಕಾಗಿ ಹೆಂಡತಿಯನ್ನು ಒತ್ತಾಯ ಮಾಡಿದ್ದ. ಆದರೆ, ಗಂಡನ ಒತ್ತಾಯಕ್ಕೆ ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಶೇಖಪ್ಪಾ ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.
ಹಾಸಿಗೆ ಸುಖ ನೀಡಲು ಒಪ್ಪಿಕೊ, ಇಲ್ಲವಾದಲ್ಲಿ ನಿನ್ನನ್ನು ಕೊಚ್ಚಿ ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ನೋಡೋಣ ಕೊಚ್ಚಿ ಹಾಕೆಂದು ಪತ್ನಿ ಸವಾಲೆಸೆದ ಕ್ಷಣವೇ ಕೊಡಲಿಯಿಂದ ಕೊಚ್ಚಿ ಹಾಕಿದ್ದಾನೆ. ನಾಗಮ್ಮಳನ್ನು ಹತ್ಯೆ ಮಾಡಿದ ಬಳಿಕ ಪತಿ ಶೇಖಪ್ಪಾ ಪೋಲಿಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸೇಡಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೆಬನಾನ್ ಪೇಜರ್ ಸ್ಫೋಟ: ಚೀನಾ ಕಣ್ಗಾವಲು ಉಪಕರಣ ನಿರ್ಬಂಧಕ್ಕೆ ಭಾರತ ನಿರ್ಧಾರ
IPL ಆಟಗಾರರಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ಸಂಭಾವನೆ: ಬಿಸಿಸಿಐ ಘೋಷಣೆ