newsics.com
ಜಕಾರ್ತ: ಚಿನ್ನದ ಗಣಿ ಕುಸಿದು 15 ಜನರು ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದ ಸುಮಾತ್ರಾ ಪ್ರಾಂತ್ಯದಲ್ಲಿ ನಡೆದಿದೆ.
ಭೂಕುಸಿತದಲ್ಲಿ ಸಿಲುಕಿದವರನ್ನು ಪತ್ತೆಹಚ್ಚಲು ರಕ್ಷಣಾ ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ.
ಈ ಘಟನೆಯ ಸಮಯದಲ್ಲಿ ಗಣಿಯಲ್ಲಿ ಸುಮಾರು 25 ಜನರಿದ್ದರು ಎನ್ನಲಾಗುತ್ತಿದೆ. ಅವರಲ್ಲಿ 15 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಇನ್ನ ಉಳಿದ 7 ಮಂದಿ ಕಾಣೆಯಾಗಿದ್ದಾರೆ. ಮೃತರನ್ನು ಸ್ಥಳಾಂತರಿಸುವ ಕ್ರಮಗಳ ಜೊತೆಗೆ ಕಾಣೆಯಾದವರಿಗಾಗಿ ಪೊಲೀಸರು ಹುಡುಕಾಟವನ್ನು ಪ್ರಾರಂಭಿಸಿದ್ದಾರೆ.
ಭಾರೀ ಮಳೆಯಿಂದಾಗಿ ಗುರುವಾರ ಸಂಜೆ ಭೂಕುಸಿತದ ನಂತರ ಸೊಲೊಕ್ ಜಿಲ್ಲೆಯ ಅಕ್ರಮ ಚಿನ್ನದ ಗಣಿ ಕುಸಿದಿದೆ ಎಂದು ಪ್ರಾಂತೀಯ ವಿಪತ್ತು ಏಜೆನ್ಸಿಯ ಮುಖ್ಯಸ್ಥ ಇರ್ವಾನ್ ಎಫೆಂಡಿ ಹೇಳಿದ್ದಾರೆ.