newsics.com
ಪರಿಶುದ್ಧವಾಗಿ ಪ್ರೀತಿಸುವವರಿಗೆ ಪ್ರೀತಿಯಲ್ಲಿ ಮೋಸ ಹೊಂದಿದ್ದರೆ, ಪ್ರೇಮಿಯು ಕೈಕೊಟ್ಟರೆ ಎನ್ನುವ ಭಯ ಕಾಡುವುದು ಸಹಜ. ಹೀಗಾಗಿ ಸಂಬಂಧವು ಗಟ್ಟಿಯಗಬೇಕೆಂದರೆ ವ್ಯಕ್ತಿಗಳಿಬ್ಬರೂ ಈ ಕೆಲವು ವಿಷಯಗಳ ಬಗ್ಗೆ ತಿಳಿಯಬೇಕು.
ಸಂಗಾತಿಗಳಿಬ್ಬರೂ ಜೊತೆಗೆ ಇರುವುದು ಕೂಡ ಸಂಬಂಧವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಬಿಡುವು ಸಿಕ್ಕಾಗಲೆಲ್ಲಾ ಲಾಂಗ್ ಡ್ರೈವ್, ಪ್ರವಾಸ ಹೀಗೆ ಒಟ್ಟಿಗೆ ಸಮಯ ಕಳೆಯಲು ಪ್ರಯತ್ನಿಸುವುದು ಒಳ್ಳೆಯ ಅಭ್ಯಾಸ. ಇದು ಬಂಧವನ್ನು ಗಟ್ಟಿಗೊಳಿಸಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪ್ರತಿಯೊಂದು ಸಂಬಂಧದಲ್ಲಿ ಪ್ರೀತಿಯಿದ್ದರೆ ಸಾಲದು ಅದನ್ನು ಜೀವಂತವಾಗಿರಿಸುವುದನ್ನು ತಿಳಿದಿರಬೇಕು. ಸಂಗಾತಿಗೆ ಇಷ್ಟವಾಗುವ ಸ್ಥಳಕ್ಕೆ ಕರೆದುಕೊಂಡು ಹೋಗುವುದು, ಇಲ್ಲದಿದ್ದರೆ ಏನಾದರೂ ಉಡುಗೊರೆ ನೀಡುವ ಮೂಲಕ ಸರ್ಪ್ರೈಸ್ ನೀಡುವುದು ಕೂಡ ಆತ್ಮೀಯತೆಯನ್ನು ಹೆಚ್ಚಿಸುತ್ತದೆ.
ಯಾವುದೇ ಸಂಬಂಧವಿರಲಿ ಉಸಿರುಗಟ್ಟಿಸುವಂತೆ ಇರಬಾರದು. ಈ ವೇಳೆಯಲ್ಲಿ ಸಂಬಂಧವು ಹೆಚ್ಚು ದಿನ ಉಳಿಯಲಾರದು. ಸಂಗಾತಿಗೆ ಸ್ವಾತಂತ್ರ್ಯ ಕೊಡುವುದು ಮುಖ್ಯ. ಪ್ರತಿಯೊಂದಕ್ಕೂ ಪ್ರಶ್ನೆ ಮಾಡುವುದು ಎಂದು ಕೇಳುವುದರಿಂದ ಪ್ರೀತಿ ಬ್ರೇಕಪ್ ಆಗಬಹುದು. ಹೀಗಾಗಿ ಪ್ರೀತಿಸುವ ವ್ಯಕ್ತಿಗೆ ಸ್ವಾತಂತ್ರ ನೀಡಿ, ಅವರಿಷ್ಟದ ಕೆಲಸ ಮಾಡಲು ಬಿಡುವುದರಿಂದಡುವುದರಿಂದ ಒಬ್ಬರ ಮೇಲಿನ ಗೌರವ ಹೆಚ್ಚಾಗಿ ಬಾಂಧವ್ಯವು ಗಟ್ಟಿಯಾಗುತ್ತದೆ.
ಪ್ರೀತಿ ಎಂದರೆ ದುಬಾರಿ ಬೆಲೆಯ ಉಡುಗೊರೆಯನ್ನು ನೀಡಿ ಒಲವು ತೋರಿಸುವುದಲ್ಲ. ಕೆಲವೊಮ್ಮೆ ಸಂಗಾತಿಯ ಸಣ್ಣ ಪುಟ್ಟ ಕೆಲಸಗಳನ್ನು ಮನಸಾರೆ ಅಭಿನಂದಿಸುವುದು ಕೂಡ ಪ್ರೀತಿಯನ್ನು ವ್ಯಕ್ತಪಡಿಸುವ ಬಗೆಯಾಗಿದೆ.