newsics.com
ಒಡಿಶಾ: 27 ವರ್ಷದ ಒಡಿಶಾದ ಗಾಯಕಿ ರುಕ್ಸಾನಾ ಬಾನು ಅವರು ಹಠಾತ್ ನಿಧನರಾಗಿದ್ದು, ಆಕೆ ವಿಷಪ್ರಾಶನಕ್ಕೊಳಗಾಗಿರುವ ಶಂಕೆಯನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.
ಒಡಿಶಾದ ಪ್ರಸಿದ್ಧ ಸಂಬಲ್ಪುರಿ ಗಾಯಕಿಯಾಗಿದ್ದ ರುಕ್ಸಾನಾ ಬಾನು ಅವರು ಭುವನೇಶ್ವರ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಸಾವನ್ನಪ್ಪಿದ್ದಾರೆ.
ರುಕ್ಸಾನಾ ಬಾನು ಸ್ಕ್ರಬ್ ಟೈಫುಸ್ (Scrub Typhus)ಎಂಬ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತ ಆಸ್ಪತ್ರೆ ಕೂಡ ರುಕ್ಸಾನಾ ಸಾವಿಗೆ ಏನು ಕಾರಣ ಎಂಬುದಕ್ಕೆ ಖಚಿತವಾದ ಮಾಹಿತಿ ಬಹಿರಂಗಪಡಿಸಿಲ್ಲ. ಸೆಪ್ಟೆಂಬರ್ 18 ರಂದು ಆಕೆ ಸ್ಕ್ರಬ್ ಟೈಫುಸ್ ಸೋಂಕಿಗೆ ಒಳಗಾಗಿರುವುದು ಗೊತ್ತಾಗಿತ್ತು.
ಆದರೆ ಆಕೆಯ ತಾಯಿ ಹಾಗೂ ಸೋದರಿ ತಮ್ಮ ಪುತ್ರಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ರುಕ್ಸಾನಾ ಬಾನುವಿನ ವಿರೋಧಿಯಾಗಿದ್ದ ಪಶ್ಚಿಮ ಒಡಿಶಾದ ಗಾಯಕಿ ಆಕೆಗೆ ವಿಷವಿಕ್ಕಿದ್ದಾಳೆ ಎಂದು ರುಕ್ಸಾನಾ ತಾಯಿ ಆರೋಪಿಸಿದ್ದಾರೆ. ಆದರೆ ವಿಷವಿಕ್ಕಿದ ಗಾಯಕಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.
ಸ್ವಲ್ಪ ದಿನಗಳ ಹಿಂದಷ್ಟೇ ರುಕ್ಸಾನಾ ಒಡಿಶಾದ ಬೊಲಂಗಿರ್‌ನಲ್ಲಿ ಶೂಟಿಂಗ್‌ನಲ್ಲಿ ತೊಡಗಿದ್ದ ವೇಳೆ ಜ್ಯೂಸೊಂದನ್ನು ಕುಡಿದಿದ್ದು, ಜ್ಯೂಸ್ ಕುಡಿದ ನಂತರ ರುಕ್ಸಾನಾ ಅಸ್ವಸ್ಥರಾಗಿದ್ದರು.
ರುಕ್ಸಾನಾ ಕುಟುಂಬದವರು ಮಾಡಿರುವ ಈ ವಿಷಪ್ರಾಶನ ಆರೋಪದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ.
ಸ್ಕ್ರಬ್ ಟೈಫಸ್ ಲಕ್ಷಣಗಳೇನು?
ಸ್ಕ್ರಬ್ ಟೈಫಸ್ ಸೋಂಕಿತ ಹುಳಗಳ ಕಡಿತದ ಮೂಲಕ ಜನರಿಗೆ ಹರಡುತ್ತದೆ. ಸ್ಕ್ರಬ್ ಟೈಫಸ್ ಅನ್ನು ಬುಷ್ ಟೈಫಸ್ ಎಂದೂ ಕರೆಯುತ್ತಾರೆ. ಇದು ಓರಿಯೆಂಟಿಯಾ ಸುಟ್ಸುಗಮುಶಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆ. ಜ್ವರ, ತಲೆನೋವು, ಮೈಕೈ ನೋವು ಮತ್ತು ದದ್ದು ಸ್ಕ್ರಬ್ ಟೈಫಸ್‌ನ ಸಾಮಾನ್ಯ ಲಕ್ಷಣಗಳಾಗಿವೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಇದು ಮಾರಣಾಂತಿಕವಾಗಲಿದೆ.
ಮಾವ ಅಸಭ್ಯವಾಗಿ ಮುಟ್ಟಿದನು! ಸೊಸೆಯ ದೂರಿನ ಮೇರೆಗೆ ಪ್ರಧಾನ ಅರ್ಚಕ ಅಮಾನತು