newsics.com
ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಳ್ಳಾರಿಯಲ್ಲಿ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ನಟ ದರ್ಶನ್ ಅವರನ್ನು ಇರಿಸಲಾಗಿದ್ದು, ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲು ಸೇರಿ 19 ದಿನಗಳೇ ಕಳೆದು ಹೋಗಿದೆ.
ಬಳ್ಳಾರಿ ಜೈಲು ಸೇರಿ 19 ದಿನ ಆದ್ರೂ ನಟ ದರ್ಶನ್ ತಾಯಿ ಮೀನಾ ತೂಗುದೀಪ ಮಗನನ್ನು ನೋಡಲು ಈ ಜೈಲಿಗೆ ಬಂದಿಲ್ಲ. ಅಮ್ಮನನ್ನು ನೋಡಬೇಕು ಎಂದು ದರ್ಶನ ಹಂಬಲಿಸುತ್ತಿದ್ದಾರಂತೆ. ಅಮ್ಮನ ಕನವರಿಕೆಯಲ್ಲೇ ದಿನದೂಡುತ್ತಿದ್ದಾರೆ ಎನ್ನಲಾಗ್ತಿದೆ.
ದರ್ಶನ್ ಪತ್ನಿ ಯಾವ© 3 ಬಾರಿ ಬಳ್ಳಾರಿ ಜೈಲಿಗೆ ಬಂದು ದರ್ಶನ್ ಭೇಟಿಯಾದ್ರು. ಸಹೋದರ ದಿನಕರ್ ತೂಗುದೀಪ್ ಕೂಡ 2 ಬಾರಿ ಬಳ್ಳಾರಿ ಜೈಲಿಗೆ ಬಂದಿದ್ರು. ಆದ್ರೆ ದರ್ಶನ್ ತಾಯಿ ಮೀನಾ ತೂಗುದೀಪ್ ಅವರು ಬಳ್ಳಾರಿ ಜೈಲಿಗೆ ಬಂದಿಲ್ಲ. ಪತ್ನಿ ಹಾಗೂ ಸಹೋದರನ ಬಳಿ ತಾಯಿಯ ಬಗ್ಗೆ ನಟ ದರ್ಶನ್ ವಿಚಾರಿಸಿದ್ದಾರೆ ಎನ್ನಲಾಗ್ತಿದೆ.