newsics.com
ಬೆಂಗಳೂರು : ರಾಧಿಕಾ ಕುಮಾರಸ್ವಾಮಿ ‘ಭೈರಾದೇವಿ’ ಚಿತ್ರದ ಪ್ರಮೋಶನ್ ಸಲುವಾಗಿ ಮನೆಯ ಮುಂದೆ ಆಟೋ ಒಂದನ್ನು ಓಡಿಸಿ ಭೈರಾದೇವಿ ಪ್ರಮೋಶನ್ ಮಾಡಿದ್ದಾರೆ.
ರಾಧಿಕಾ ಆಟೋ ಓಡಿಸುವ ವೀಡಿಯೋ ಸಹಜವಾಗಿಯೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಚಿತ್ರವು ಬಿಗ್ ಬಜೆಟ್ ಹೊಂದಿದ್ದು, ಕನ್ನಡ, ತೆಲುಗು ಹಾಗು ತಮಿಳು ಭಾಷೆಗಳಲ್ಲಿ ಬಿಡುಗಡೆ ಕಾಣಲಿದೆ.
ರಾಧಿಕಾ ಕುಮಾರಸ್ವಾಮಿ ‘ಭೈರಾದೇವಿ’ ಚಿತ್ರದ ಪ್ರಮೋಶನ್ ಸಲುವಾಗಿ ಇತ್ತೀಚೆಗಷ್ಟೇ ಎಲ್ಲಾ ಚಾನೆಲ್‌ಗಳ ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ ರಾಧಿಕಾ. ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಚಿತ್ರವು ಮುಂದಿನ ತಿಂಗಳು 3ಕ್ಕೆ (03 October 2024) ರಂದು ಬಿಡುಗಡೆಯಾಗುತ್ತಿದೆ.
https://www.instagram.com/reel/C_7_wV2PRph/?igsh=YTc4djBhcnNkZ3ht