newsics.com
ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಸೇರಿದಂತೆ 3 ಕಡೆ ಹೊಸ ಪ್ರಭೇದದ ಸಗಣಿ ಜೀರುಂಡೆ (DUNG BEETLE) ಪತ್ತೆಯಾಗಿದೆ.
ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್ ಕೀಟಶಾಸ್ತ್ರಜ್ಞರು ಈ ಜೀರುಂಡೆಗಳನ್ನು ಪತ್ತೆ ಹಚ್ಚಿದ್ದಾರೆ.
ಈ ಮೂಲಕ ಜಾಗತಿಕವಾಗಿ 176 ಜಾತಿಯ ಜೀರುಂಡೆಗಳಿಗೆ ಈಗ ಮೂರು ಜಾತಿಯ ಹೊಸ ಜೀರುಂಡೆಗಳು ಸೇರ್ಪಡೆಗೊಂಡಿವೆ.
ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶ, ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲು ಮತ್ತು ಅಸ್ಸೋಂನ ತೇಜ್ಪುರದಲ್ಲಿ ತಲಾ ಒಂದೊಂದು ಜೀರುಂಡೆ ಪತ್ತೆಯಾಗಿವೆ.
ಬಿಳಿಗಿರಿರಂಗನಾಥ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಒನಿಟಿಸ್ ಕೆಥಾಯ್’, ಅಸ್ಸಾಂನ ತೇಜ್ಪುರದಲ್ಲಿ ‘ಒನಿಟಿಸ್ ಬೊಮೊರೆನ್ಸಿಸ್’ ಹಾಗೂ ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲಿನಲ್ಲಿ ‘ಒನಿಟಿಸ್’ ಜಾತಿ ಜೀರುಂಡೆ ಕಂಡುಬಂದಿವೆ.
ಏಟ್ರಿಯಲ್ಲಿ ಕೀಟಶಾಸ್ತ್ರಜ್ಞರಾಗಿ ಸಂಶೋಧನೆಯಲ್ಲಿ ತೊಡಗಿರುವ ಪ್ರಿಯದರ್ಶನ್ ಧರ್ಮರಾಜನ್ ಮತ್ತು ಕರಿಂಬುಂಕರ ಅವರು ಈ ಹೊಸ ಜೀರುಂಡೆಗಳನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಹೆಸರಘಟ್ಟದಲ್ಲಿ ಪತ್ತೆಯಾದ ಜೀರುಂಡೆಗೆ ವಿಸ್ತಾರ, ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಜೀರುಂಡೆಗೆ ಕೇತಗೌಡ ಹಾಗೂ ಅಸ್ಸೋಂನಲ್ಲಿ ಪತ್ತೆಯಾದ ಜೀರುಂಡೆಗೆ ಕೋಲಿಯಾ ಬೊಮೊರಾ ಎಂಬ ಸೇತುವೆ ಹೆಸರಿಡಲಾಗಿದೆ.
ವಾರಕ್ಕೊಬ್ಬನ ಜೊತೆಗೆ ಲಿವ್ ಇನ್ ರಿಲೇಷನ್ಶಿಪ್! ಇದು ಮುರಿಯಾ ಜನರ ಸಂಪ್ರದಾಯ