newsics.com
ನಟ ದರ್ಶನ್ ಅವರು ಹೊಸ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನ ಜೈಲಿನಲ್ಲಿ ಹಾಯಾಗಿದ್ದ ಅವರು ಈಗ ಬಳ್ಳಾರಿಗೆ ಜೈಲಿಗೆ ಬಂದಿದ್ದಾರೆ. ಇಲ್ಲಿ ಅವರು ಹೊಸ ಬೇಡಿಕೆ ಇಟ್ಟಿದ್ದಾರೆ. ‘ಬೇರೆ ಜೈಲಿಗೆ ನನ್ನ ಶಿಫ್ಟ್ ಮಾಡಿ. ಈ ಜೈಲು ಸೆಟ್ ಆಗುತ್ತಿಲ್ಲ’ ಎಂದು ದರ್ಶನ್ ಹೇಳಿದ್ದಾರಂತೆ. ಈ ರೀತಿಯ ಮನವಿಯನ್ನು ಅವರು ಕೋರ್ಟ್ ಎದುರು ಮಾಡಬೇಕಿದೆ.
ಇನ್ನು ಕೊಲೆ ಆರೋಪದ ಮೇಲೆ ಜೈಲು ಸೇರಿರೋ ನಟ ದರ್ಶನ್ ಈಗ ಮತ್ತೆ ದರ್ಪ ತೋರಿದ್ದಾರೆ. ಬಳ್ಳಾರಿ ಜೈಲಿಗೆ ನಟ ದರ್ಶನ್ ಪತ್ನಿ ಭೇಟಿಯಾಗಲು ಬಂದಿದ್ದರು. ಈ ವೇಳೆ ಸೆಲ್‌ನಿಂದ ಹೊರಬಂದ ದರ್ಶನ್ ಮಿಡಲ್ ಫಿಂಗರ್ ತೋರಿಸಿ ದರ್ಪ ಮೆರದಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ಬೇಸತ್ತಿರುವ ದರ್ಶನ್ ಮನವಿ ಪುರಸ್ಕಾರ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.