newsics.com
ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮದುವೆಯಾದ ಆರು ವರ್ಷಗಳ ನಂತರ ದೀಪಿಕಾ ಮತ್ತು ರಣವೀರ್ ಸಿಂಗ್ ಪೋಷಕರಾಗಿದ್ದಾರೆ. ಹೆರಿಗೆಗೆ ಎರಡು ದಿನಗಳ ಮೊದಲು ದೀಪಿಕಾ-ರಣ್ವೀರ್ ಗಣಪತಿ ದೇವರ ದರ್ಶನಕ್ಕಾಗಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗಿದ್ದರು. ನಂತರ ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಪ್ಟೆಂಬರ್ 9 ಭಾನುವಾರದಂದು ದೀಪಿಕಾ ತಮ್ಮ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿ ಹಂಚಿಕೊಂಡಿದ್ದರು.
ಹೌದು, ರಣವೀರ್-ದೀಪಿಕಾ ಅವರ ಮಗಳನ್ನು ಕಾಣಲು ಮುಖೇಶ್ ಅಂಬಾನಿ ಆಸ್ಪತ್ರೆಗೆ ಬಂದಿದ್ದಾರೆ. ಕಟ್ಟುನಿಟ್ಟಿನ ಭದ್ರತೆಯಲ್ಲಿ ಅವರ ಕಾರು ಆಸ್ಪತ್ರೆ ತಲುಪುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಣವೀರ್ ಮತ್ತು ದೀಪಿಕಾ, ಅಂಬಾನಿ ಕುಟುಂಬದೊಂದಿಗೆ ಬಹಳ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ರಣವೀರ್ ಮತ್ತು ದೀಪಿಕಾ ಭಾಗವಹಿಸಿದ್ದರು. ಇವರಿಬ್ಬರೂ ವಿವಾಹ ಪೂರ್ವದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ದೀಪಿಕಾ ಮಗಳಿಗೆ ಜನ್ಮ ನೀಡಿದ ಆಸ್ಪತ್ರೆ ಕೂಡ ಮುಖೇಶ್ ಮತ್ತು ನೀತಾ ಅಂಬಾನಿ ಅವರ ಒಡೆತನದಲ್ಲಿದೆ.