newsics.com
ಪೋಷಕರು ಹಾಗೂ ಮಕ್ಕಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಹೀಗಾಗಿ ಮಗುವಿಗೆ ಮೊಟ್ಟ ಮೊದಲ ಆದರ್ಶ ವ್ಯಕ್ತಿಗಳು ತಂದೆ ತಾಯಿಯೇ ಆಗಿರುತ್ತದೆ. ಇತ್ತ ಪೋಷಕರು ಕೂಡ ತಮ್ಮ ಜವಾಬ್ದಾರಿ ಹಾಗೂ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಬೇಕು. ನಿಮ್ಮ ವ್ಯಕ್ತಿತ್ವ, ಮಾತು, ನಡವಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಅದು ಮಗುವಿನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಪೋಷಕರು ಮಗುವಿನ ಈ ಮಾತುಗಳನ್ನು ಆಡುವಾಗ ಸ್ವಲ್ಪ ಎಚ್ಚರ ವಹಿಸಬೇಕು.
ಮಕ್ಕಳನ್ನು ಹೋಲಿಕೆ ಮಾಡಬೇಡಿ : ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗಾಗಲಿ ಅಥವಾ ನಿಮ್ಮ ಬಾಲ್ಯದೊಂದಿಗೆ ಹೋಲಿಸಬೇಡಿ. ನಿಮ್ಮ ವಯಸ್ಸಿನಲ್ಲಿ ನಾನು ಹೀಗಿದ್ದೆ, ಹಾಗಿದ್ದೆ. ನಿನ್ನ ನೋಡು, ನೀನು ಹೇಗೆ ಇದ್ದಿಯಾ ಹೇಳಿದ್ದು ಒಂದು ಮಾತು ಕೂಡ ಕೇಳಲ್ಲ ಎಂದು ಹೇಳಲು ಹೋಗಲೇಬೇಡಿ. ಇದರಿಂದ ಮಕ್ಕಳ ಮನಸ್ಸಿಗೆ ನೋವಾಗಬಹುದು. ಈ ವರ್ತನೆಯಿಂದ ಪೋಷಕರ ಮೇಲೆ ಮಕ್ಕಳಿಗೆ ದ್ವೇಷದಂತಹ ಭಾವನೆಯು ಹುಟ್ಟಿಕೊಳ್ಳುತ್ತದೆ.
* ಮಕ್ಕಳ ನಿರ್ಧಾರವನ್ನು ಹೀಯಾಳಿಸಬೇಡಿ : ಹೆಚ್ಚಿನ ಪೋಷಕರು ಯಾವುದಾದರು ವಿಷಯಗಳಲ್ಲಿ ತಮ್ಮ ನಿರ್ಧಾರವನ್ನು ಮಕ್ಕಳು ಹೇಳಲು ಬಂದರೆ ಅವರ ಬಾಯಿ ಮುಚ್ಚಿಸುವುದು. ತಪ್ಪೆಂದು ಮುಖಕ್ಕೆ ಹೊಡೆದಂತೆ ಹೇಳಿ ಬಿಡುತ್ತಾರೆ. ಹೀಗೆ ಮಾಡುವುದು ನಿಜಕ್ಕೂ ಸರಿಯಲ್ಲ. ಮಕ್ಕಳಿಗೆ ತಮ್ಮ ನಿರ್ಧಾರದಲ್ಲಿ ಯಾವುದು ಸರಿ-ಯಾವುದು ತಪ್ಪು ಎನ್ನುವಾ ಬಗ್ಗೆ ಸ್ಪಷ್ಟವಾಗಿ ಹೇಳುವುದು ಪೋಷಕರ ಕೆಲಸ.
ಬಹುತೇಕ ಪೋಷಕರು ಮಕ್ಕಳಿಗೆ ಸಹೋದರ ಸಹೋದರಿಯರಿದ್ದರೆ ಅವರೊಂದಿಗೆ ಹೋಲಿಕೆ ಮಾಡಿ ಮಾತನಾಡುತ್ತಾರೆ. ನೀನು ನಿನ್ನ ಅಕ್ಕ-ಅಣ್ಣನನ್ನು ನೋಡಿ ಕಲಿತುಕೊಳ್ಳಬೇಕು ಎನ್ನುವ ಮಾತನ್ನು ಸದಾ ಆಡುತ್ತಾರೆ. ಈ ಮಾತುಗಳಿಂದ ಒಡಹುಟ್ಟಿದವರ ಮೇಲೆ ದ್ವೇಷದ ಭಾವನೆ ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಈ ರೀತಿ ಹೋಲಿಕೆ ಮಾಡಿ ಮಾತನಾಡುವುದನ್ನು ತಪ್ಪಿಸುವುದು ಉತ್ತಮ