newsics.com
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಂದು ಬೆಂಗಳೂರಿನ ಶಿವಾಜಿನಗರದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟಿಸಿದರು.
ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ 4 ಕೋಟಿ ವೆಚ್ಚದಲ್ಲಿ 130 ಹಾಸಿಗೆಗಳುಳ್ಳ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ಇದನ್ನು ಇಂದು ಅಧಿಕೃತವಾಗಿ ಸಿಎಂ, ಡಿಸಿಎಂ ಸೇರಿದಂತೆ ಸಚಿವರು ಶಾಸಕರು ಸೇರಿಕೊಂಡು ಉದ್ಘಾಟಿಸಿದರು.
ಸಿಎಂ ಭಾಷಣ ಆರಂಭಿಸಿದರು. ಆದ್ರೆ, ಅದೇ ಹೊತ್ತಿಗೆ ಆಜಾನ್ ಶುರುವಾಗಿದೆ. ಆಜಾನ್ ಕೂಗು ಕೇಳಿಸಿದ ಸಿದ್ದರಾಮಯ್ಯನವರು ತಮ್ಮ ಭಾಷಣ ನಿಲ್ಲಿಸಿ ಮೌನಕ್ಕೆ ಶರಣಾದರು. ಆಜಾನ್ ಮುಗಿಯುವವರೆಗೂ ಅಂದರೆ ಸುಮಾರು ಐದು ನಿಮಿಷಗಳ ಕಾಲ ಏನು ಮಾತನಾಡದೇ ಹಾಗೆಯೇ ನಿಂತಿದ್ದರು ನಂತರ ಆಜಾನ್ ಮುಗಿದ ಬಳಿಕ ಸಿದ್ದರಾಮಯ್ಯನವರು ತಮ್ಮ ಭಾಷಣ ಮುಂದುವರಿಸಿದರು.
ದೇಶದ ಜನರ ಹಸಿವು ನೀಗಿಸಲು 83 ಆನೆ ಸೇರಿ 723 ಕಾಡುಪ್ರಾಣಿಗಳ ಹತ್ಯೆಗೆ ಮುಂದಾದ ಸರ್ಕಾರ!