newsics.com
ಮುಂಬೈ: ಮುಂಬೈನ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬ ಎಸಿಬಿ ರೇಡ್ ಮಾಡಿದ ಸಮಯದಲ್ಲಿ ಲಂಚದ ಹಣವನ್ನು ಶೌಚಾಲಯದಲ್ಲಿ ಎಸೆದು, ಫ್ಲಶ್ ಮಾಡಿದ್ದಾರೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆಯಿಂದ ಪಿಎನ್ಜಿ ಗ್ಯಾಸ್ ಕನೆಕ್ಷನ್ ಮಾಡಲು ಅಗ್ನಿಶಾಮಕ ಇಲಾಖೆಯಿಂದ ನೋ ಆಬ್ಜ್ಕ್ಷನ್ ಸರ್ಟಿಫಿಕೆಟ್ (NOC) ಪಡೆಯಲು ಅಂತ ಆ ಕಂಪನಿಯಿಂದ ರೆಸ್ಟೋರೆಂಟ್ವೊಂದು ಸೇವೆ ತೆಗೆದುಕೊಂಡಿತ್ತು. ಮಹಾನಗರ ಪಾಲಿಕೆಗೆ ಭೇಟಿ ಕೊಟ್ಟು ಅರ್ಜಿಯನ್ನು ಕೊಟ್ಟಾಗ ಬಿಎಂಸಿ ಹಿರಿಯ ಅಧಿಕಾರಿಯಾದ ಪ್ರಹ್ಲಾದ್ ಶಿಟೋಳೆ 1 ಲಕ್ಷ 30 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದರಂತೆ. ಅಷ್ಟು ಹಣ ನೀಡಿದರೆ ಮಾತ್ರ ಎನ್ಒಸಿ ಕೊಡುವುದಾಗಿ ಹೇಳಿದ್ದರಂತೆ.
60 ಸಾವಿರ ರೂಪಾಯಿ ಕೊಡಲು ಹೊರಟ ಸಂಪರ್ಕಾಧಿಕಾರಿಗೆ ಶಿಟೋಳೆ ಗ್ರೌಂಡ್ ಫ್ಲೋರ್‌ಗೆ ಬರಲು ಹೇಳಿ ಆಮೇಲೆ ಲಿಫ್ಟ್ ನಲ್ಲಿ ಹೋಗುವಾಗ 60 ಸಾವಿರ ರೂಪಾಯಿ ಲಂಚವನ್ನು ಪಡೆಯುತ್ತಾನೆ.
ಕೊಟ್ಟ ನೋಟುಗಳ ಮೇಲೆ ಒಂದು ರೀತಿಯ ಪೌಡರ್ ಇರುವುದನ್ನು ಕಂಡು ನೇರವಾಗಿ ತನ್ನ ನಾಲ್ಕನೇ ಫ್ಲೋರ್ನಲ್ಲಿರುವ ಆಫೀಸ್ಗೆ ಹೋಗಿ ದುಡ್ಡುನ್ನು ಟಾಯ್ಲೆಟ್ನಲ್ಲಿ ಎಸೆದು ಫ್ಲಶ್ ಮಾಡಿದ್ದಾನೆ.
ಈಗಾಗಲೇ 57 ಸಾವಿರ ರೂಪಾಯಿ ಹಣವನ್ನು ರಿಕವರಿ ಮಾಡಲಾಗಿದೆ. ಉಳಿದ ಮೂರು ಸಾವಿರ ರೂಪಾಯಿ ಕೊಚ್ಚಿಕೊಂಡು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಟೋಳೆ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಹಾಗೂ ಸಾಕ್ಷಿನಾಶದ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು. ಸೆಪ್ಟಂಬರ್ 3ರವರೆಗೂ ಶಿಟೋಳೆಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಈಗ ಆ ಹಣವನ್ನು ಹುಡುಕಲು ಎಸಿಬಿ ಆಫೀರ್ಸ್ ದಹಿಸಾರ್ ಪ್ರದೇಶದಲ್ಲಿ ಒಟ್ಟು 20 ಚರಂಡಿಗಳನ್ನು ಜಾಲಾಡಿದ್ದಾರೆ.