newsics.com
ಮುಂಬೈ: ʻಆದಿಪುರುಷ್ʼಸಿನಿಮಾದಲ್ಲಿ ಡಾರ್ಲಿಂಗ್ ಪ್ರಭಾಸ್ ಜೊತೆ ನಟಿಸಿದ್ದ ಹಿರಿಯ ನಟಿ ಆಶಾ ಶರ್ಮಾ (88) ಭಾನುವಾರ ನಿಧನರಾಗಿದ್ದಾರೆ.
ಹಿರಿಯ ನಟಿ 88ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಆಕೆಯ ಸಾವಿಗೆ ಇನ್ನೂ ಕಾರಣ ಬಹಿರಂಗಪಡಿಸಿಲ್ಲ.
ಆಶಾ ಶರ್ಮಾ ನಿಧನಕ್ಕೆ ಸಿನಿ ಮತ್ತು ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (CINTAA) ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದೆ.