newsics.com
ಬೆಳ್ಳಂ ಬೆಳಗ್ಗೆಯೇ ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕುರಿತಾಗಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
38 ವರ್ಷದ ಶಿಖರ್ ಧವನ್ ಕೊನೆಯದಾಗಿ ಬಾಂಗ್ಲಾದೇಶದ ವಿರುದ್ಧ ODI ಸರಣಿಯಲ್ಲಿ ಆಡಿದ್ದರು. ಆ ಬಳಿಕ ಅವರ ಸ್ಥಾನವನ್ನು 2022ರಲ್ಲಿ ಶೂಭ್ಮನ್ ಗಿಲ್ ಕಸಿದುಕೊಂಡರು. ಆದರೀಗ ಶಿಖರ್ ಧವನ್ ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ವೃತ್ತಿ ಜೀವನದ ಉದ್ದಕ್ಕೂ ಪ್ರೋತ್ಸಾಹ ಮತ್ತು ಪ್ರೀತಿ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.
ಶಿಖರ್ ಧವನ್ ದೆಹಲಿ ಮೂಲದವರಾಗಿದ್ದು, ವಿಶಾಖಪಟ್ಟಣಂನಲ್ಲಿ ನಡೆದ ODI ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದರು. ಆದರೆ ಎರಡು ಎಸೆತಗಳ ಡಕ್ ಗೆ ಔಟ್ ಆಗುವ ಮೂಲಕ ವೃತ್ತಿ ಜೀವನದಲ್ಲಿ ಉತ್ತಮ ಆಟವನ್ನು ತೋರಿಸಿರಲಿಲ್ಲ. ಆರಂಭಿಕ ವೈಫಲ್ಯದ ಅನುಭವಿಸುತ್ತಿದ್ದ ಶಿಖರ್ 2013ರಲ್ಲಿ ಟೀಂ ಇಂಡಿಯಾಗೆ ಮರಳಿದರು. ಮೂರು ಸ್ವರೂಪದಲ್ಲಿ ಗುರುತಿಸಿಕೊಂಡರು.