newsics.com
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ಮೇಘಾ ಶೆಟ್ಟಿ ಆಗಾಗ ರೀಲ್ಸ್ ಮಾಡುವುದರ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಹಲವು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದು, ಇದೀಗ ಸೀರೆಯುಟ್ಟು ಮಿಂಚಿದ್ದಾರೆ.

ಚಂದನವನದಲ್ಲಿ ಸಿನಿಮಾ ಕೆಲಸಗಳ ಮಧ್ಯೆ ಬ್ಯುಸಿಯಾಗಿರುವ ನಟಿ ಮೇಘಾ ಶೆಟ್ಟಿ ಹಾಟ್ ಫೋಟೋ, ಫಿಟ್ನೆಸ್ ವಿಡಿಯೋ ಮೂಲಕ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಮೇಘಾ ಶೆಟ್ಟಿ ಇದೀಗ ಸಾಂಪ್ರದಾಯಿಕ ಶೈಲಿಯಲ್ಲಿ ನೀಲಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಜೊತೆಗೆ ಅವರು ತೊಟ್ಟ ನೆಕ್ಲೇಸ್, ಕಿವಿಯೊಲೆ, ಸರಳವಾದ ಮೇಕಪ್ ಸಖತ್ ಹೈಲೈಟ್ ಆಗಿದೆ. ಕೆಣಕುತಿದೆ ನಿನ್ನ ಕಣ್ಣೋಟ ಅಂತೆಲ್ಲ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.