newsics.com
ಬೆಂಗಳೂರು:ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನಿನ್ನೆ ಅನುಮತಿ ಕೊಟ್ಟಿದ್ದೇ ತಡ ಯಾದಗಿರಿಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ್ತಿದ್ದು, ಸತ್ಯಾಗ್ರಹದಲ್ಲಿ ನಿರತವಾಗಿರುವಾಗಲೇ ಅಸ್ವಸ್ಥಗೊಂಡಿರುವಂತಹ ಘಟನೆ ನಡೆದಿದೆ.
ಸುಭಾಷ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕದ ಸಿದ್ದರಾಮಯ್ಯ ಅಭಿಮಾನಿ ಬ್ರಿಗೇಡ್ ರಾಜ್ಯಾಧ್ಯಕ್ಷ ರಾಜಕುಮಾರ್ ಗಣೇಶ್ರಿಂದ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಂಡಿದ್ದಾರೆ. ಸತ್ಯಾಗ್ರಹ ನಿರತವಾಗಿರುವಾಗಲೇ ರಾಜಕುಮಾರ್ ಗಣೇಶ್ ಅಸ್ವಸ್ಥರಾಗಿದ್ದಾರೆ.
ನಸುಕಿನ ಜಾವದಿಂದಲೇ ರಾಜಕುಮಾರ್ ಏಕಾಂಗಿ ಹೋರಾಟ ಮಾಡುತ್ತಿದ್ದರು. ಈ ವೇಳೆ ನಿತ್ರಾಣಗೊಂಡು ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ