newsics.com
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಭಾರೀ ಮಳೆ ಅಲರ್ಟ್ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರು ನಗರ ಸೇರಿಂದತೆ ಸುತ್ತಲಿನ ಜಿಲ್ಲೆಗಳಲ್ಲಿ ಭಾರೀ ಮಳೆ ಬರಲಿದೆ. ಆಗಸ್ಟ್ 14 ರಿಂದ 18 ರವರೆಗೆ ಭಾರೀ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.
ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ನಿಲ್ಲಲಿದೆ. ತಗ್ಗು ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜತೆಗೆ ಆಗಸ್ಟ್ 15 ರಿಂದ 18 ರವರೆಗೂ ಸಾಲು ಸಾಲು ರಜೆ ಇದೆ. ಹಾಗಾಗಿ ಊರಿಗೆ ಹೋಗುವ ಬರುವ ವಾಹನಗಳು ಹೆಚ್ಚಾಗಿರೋ ಕಾರಣ ಇಡೀ ಬೆಂಗಳೂರಲ್ಲಿ ಭಾರೀ ಟ್ರಾಫಿಕ್ ಇರಲಿದೆ ಎಂದು ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ಎಮ್ ಎನ್ ಅನುಚೇತ್ ಹೇಳಿದ್ದಾರೆ.