newsics.com
ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಬಾಲರಾಮನ ವಿಗ್ರಹ ನಿರ್ಮಿಸಿಕೊಟ್ಟ ಮೈಸೂರು ಮೂಲದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್‌ಗೆ ವೀಸಾ ನೀಡಲು ಅಮೆರಿಕ ನಿರಾಕರಿಸಿದೆ. ಇದಕ್ಕೆ ಅಮೆರಿಕ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ.
ಅರುಣ್ ಯೋಗಿರಾಜ್ ಕುಟುಂಬ ವೀಸಾ ನೀಡದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದೆ. ಅರುಣ್ ಅವರ ಪತ್ನಿ ವಿಜೇತಾ ಈಗಾಗಲೇ ಅಮೆರಿಕಕ್ಕೆ ತೆರಳಿದ್ದು, ಇಂತಹ ಪರಿಸ್ಥಿತಿಯಲ್ಲಿ ಅರುಣ್ ಗೆ ವೀಸಾ ನಿರಾಕರಣೆ ಆಗಿರುವುದು ಅನಿರೀಕ್ಷಿತ ಎಂದು ಕುಟುಂಬದ ಮೂಲಗಳು ಹೇಳುತ್ತವೆ.
ಮೈಸೂರು ಮೂಲದ ಶಿಲ್ಪಿ ಅರುಣ್ ಕೂಡ ಅಮೆರಿಕಕ್ಕೆ ಎಲ್ಲ ಸಿದ್ಧತೆಗಳನ್ನು ಮುಗಿಸಿದ್ದರು. ಅರುಣ್ ಯೋಗಿರಾಜ್ ಕೂಡ ಅಮೆರಿಕದಿಂದ ವೀಸಾ ನಿರಾಕರಣೆಯನ್ನು ಖಚಿತಪಡಿಸಿದ್ದಾರೆ. ನನಗೆ ಯಾವುದೇ ಕಾರಣ ತಿಳಿದಿಲ್ಲ, ಆದರೆ ನಾವು ವೀಸಾ ಸಂಬಂಧಿತ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದಿದ್ದಾರೆ.
12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅರುಣ್ ಯೋಗಿರಾಜ್ ಅವರು ಅಮೆರಿಕಕ್ಕೆ ಹೋಗಬೇಕಾಗಿದೆ. ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ವರ್ಷಕ್ಕೆ ಎರಡು ಬಾರಿ ಆಯೋಜಿಸಲಾಗುತ್ತದೆ. ಅಮೆರಿಕ ಸೇರಿದಂತೆ ವಿಶ್ವದ ಇತರ ಭಾಗಗಳಲ್ಲಿ ವಾಸಿಸುವ ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ