newsics.com
ಯಾತ್ರಿಕರ ವಾಹನವೊಂದು ವಿದ್ಯುತ್ ತಂತಿಗೆ ತಗುಲಿ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಹಾರದ ಹಾಜಿಪುರದ ಬಳಿ ನಡೆದಿದೆ.
ಘಟನೆಯಲ್ಲಿ ಆರು ಮಂದಿ ಅಸ್ವಸ್ಥಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಹಾಜಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶ್ರಾವಣ ಸೋಮವಾರದ ಪ್ರಯುಕ್ತ ತಮ್ಮೂರಿನಿಂದ ತಂದ ಗಂಗಾಜಲವನ್ನು ಅರ್ಪಿಸಲು ಯಾತ್ರಿಕರು ತಂಡೋಪತಂಡವಾಗಿ ತೆರಳುತ್ತಿದ್ದರು.