newsics.com
ಸಂಗೀತ ನಿರ್ದೇಶಕರಾಗಿ, ಸಂಯೋಜಕರಾಗಿ, ಗಾಯಕರಾಗಿ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಗಾಯಕ ರೂಪ್ ಸಿಂಗ್ ರಾಥೋಡ್ ಪ್ರಸಿದ್ಧ ತಬಲಾ ವಾದಕರಾಗಿದ್ದರು. ದಿಗ್ಗಜ ಗಾಯಕರಿಗೆ ತಬಲಾ ತಯಾರಿಸಿ ದೊಡ್ಡ ದೇಶಗಳಲ್ಲಿ ಅವರೊಂದಿಗೆ ವೇದಿಕೆ ಕಾರ್ಯಕ್ರಮ ನೀಡಿದವರು. ಈ ಗಾಯಕ ತನ್ನ ಗುರು ಅನೂಪ್ ಜಲೋಟಾ ಅವರ ಪತ್ನಿಯನ್ನು ಮದುವೆಯಾಗಿದ್ದಾರೆ .
ವಾಸ್ತವವಾಗಿ ತಮ್ಮ ವೃತ್ತಿಜೀವನದ ಆರಂಭದಲ್ಲಿ, ರೂಪ್ ಕುಮಾರ್ ರಾಥೋಡ್ ಅವರು ಪ್ರಸಿದ್ಧ ಬಾಲಿವುಡ್ ಭಜನ್ ಗಾಯಕ ಅನೂಪ್ ಜಲೋಟಾ ಅವರ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಗುರು ಅನುಪ್ ಜಲೋಟಾ ಅವರಿಂದ ಸಂಗೀತದ ಸೂಕ್ಷ್ಮಗಳನ್ನು ಕಲಿತುಕೊಳ್ಳುವುದರ ಜೊತೆಗೆ, ರೂಪ್ ಕುಮಾರ್ ಸ್ವತಃ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದರು. ರೂಪ್ ಕುಮಾರ್ ಅವರು ಅನುಪ್ ಜಲೋಟಾ ಅವರ ತಂಡದಲ್ಲಿ ಕೆಲಸ ಮಾಡುತ್ತಿದ್ದಾಗ ಅನೂಪ್ ಜಲೋಟಾ ಅವರ ಪತ್ನಿ ಸೋನಾಲಿ ಸೇಠ್ ಮನೆಗೆ ಭೇಟಿ ನೀಡುವಾಗ ಸ್ನೇಹಿತರಾದರು. ಸ್ವಲ್ಪ ಸಮಯದ ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿತು.
ಇನ್ನು 1984 ರವರೆಗೆ, ರೂಪ್ ಕುಮಾರ್ ರಾಥೋಡ್ ಅವರು ಅನೂಪ್ ಅವರೊಂದಿಗೆ ಸಂಗೀತ ಗುಂಪಿನ ಭಾಗವಾಗಿದ್ದರು. ಅನೂಪ್ ಅವರ ತಂಡದಲ್ಲಿ ರೂಪ್ ಕುಮಾರ್ ತಬಲಾ ನುಡಿಸುತ್ತಿದ್ದರು. 1984 ರಲ್ಲಿ ಅನೂಪ್ ಜಲೋಟಾ ಅವರಿಗೆ ಅಮೆರಿಕಾದಲ್ಲಿ ಕಾರ್ಯಕ್ರಮ ಮಾಡಲು ಆಹ್ವಾನ ಬಂದಿತು. ಅನುಪ್ ಜಲೋಟಾ ಕೂಡ ತನ್ನ ಪತ್ನಿ ಸೋನಾಲಿಯನ್ನು ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದರು. ಆದರೆ, ಸೋನಾಲಿ ಅಮೆರಿಕಕ್ಕೆ ಹೋಗಲು ನಿರಾಕರಿಸಿದ್ದರು. ಅಸಲಿಗೆ ಇವರಿಬ್ಬರ ನಡುವಿನ ಅನೈತಿಕ ಸಂಬಂಧವೇ ಇದಕ್ಕೆ ಕಾರಣ ಎನ್ನಲಾಗಿದೆ. ಅನುಪ್ ಜಲೋಟಾ ಅಮೆರಿಕಕ್ಕೆ ಹೋದ ತಕ್ಷಣ ಸೋನಾಲಿಯನ್ನು ಪ್ರೇಮಿ ರೂಪ್ ಕುಮಾರ್ ಜೊತೆ ಓಡಿ ಹೋಗಿದ್ದರು
ಈ ಸುದ್ದಿ ತಿಳಿದ ಅನುಪ್ ಜಲೋಟಾ ಇದರ ವಿರುದ್ಧ ಸಾಕಷ್ಟು ಪ್ರತಿಭಟನೆ ನಡೆಸಿದ್ದರು. ಆದರೂ ಅನುಪ್ ಪ್ರಯತ್ನಗಳು ವಿಫಲವಾದವು.
ಸುಮಾರು 4 ವರ್ಷಗಳಿಂದ ಇಬ್ಬರೂ ತಮ್ಮ ಪ್ರೀತಿಯನ್ನು ಬಚ್ಚಿಟ್ಟಿದ್ದರು. ಆದರೂ ಅವರ ಸಂಬಂಧದ ಸುದ್ದಿ ಮಾಧ್ಯಮದ ಮುಖ್ಯಾಂಶಗಳಲ್ಲಿ ಉಳಿಯಿತು. 1989 ರಲ್ಲಿ, ರೂಪ್ ಕುಮಾರ್ ರಾಥೋಡ್ ಮತ್ತು ಸೋನಾಲಿ ಸೇಠ್ ವಿವಾಹವಾದರು. ಈ ಸುದ್ದಿಯನ್ನು ಮುಚ್ಚಲಾಯಿತು. ರೂಪ್ ಕುಮಾರ್ ರಾಥೋಡ್ ಅವರು ‘ಏ ಜಾತೆ ಹುಯೆ ಲಮ್ಹೋ..’, ‘ಸಾದೇ ಸೆ ಆತೆ ಹೈ..’, ‘ಸಾವ್ರೆ-ಸಾವ್ರೆ..’, ‘ಬರ್ಸಾತ್ ಕೆ ಮೌಸಮ್ ಮೇ..’ ನಂತಹ ಅನೇಕ ಹಿಟ್ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ.