newsics.com
ಸ್ಯಾನ್ ಫ್ರಾನ್ಸಿಸ್ಕೊ: ಕ್ರಿಕೆಟ್ ಕೆಲವೊಮ್ಮೆ ಅದು ಮಾರಕವೂ ಆಗುತ್ತದೆ. ಈ ಆಟದ ಅಪಾಯಕಾರಿ ರೂಪವು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಬೆಳಕಿಗೆ ಬಂದಿದ್ದು, ದಕ್ಷಿಣ ಆಫ್ರಿಕಾದ ವೇಗಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ಮತ್ತು ಸಿಯಾಟಲ್ ಆರ್ಕ್ಸ್ ನಡುವಿನ ಪಂದ್ಯದಲ್ಲಿ, ಎಡಗೈ ವೇಗಿ ಕಾರ್ಮಿ ಲೆ ರೂಕ್ಸ್ ಗಾಯಗೊಂಡಿದ್ದಾರೆ.
ಬುಧವಾರದಂದು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಮತ್ತು ಸಿಯಾಟಲ್ ಆರ್ಕ್ಸ್ ಪರಸ್ಪರ ಮುಖಾಮುಖಿಯಾಗಿದ್ದವು.
ಮೊದಲು ಬ್ಯಾಟಿಂಗ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ 7 ವಿಕೆಟ್‌ಗೆ 165 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಸಿಯಾಟಲ್ ಆರ್ಕ್ಸ್ ಇನ್ನಿಂಗ್ಸ್‌ನ ಮೂರನೇ ಓವರ್ ನಡೆಯುತ್ತಿರುವಾಗ ಈ ಅವಘಡ ಸಂಭವಿಸಿದೆ.
ಕಾರ್ಮಿ ಲೀ ರಾಕ್ಸ್ ಓವರ್‌ನ ನಾಲ್ಕನೇ ಎಸೆತವನ್ನು ಬ್ಯಾಟರ್‌ಗೆ ಎಸೆದಿದ್ರು, ವೇಗವಾಗಿ ಬಂದ ಬಾಲ್‌ಗೆ ಬ್ಯಾಟರ್ ಬ್ಯಾಟ್ ಬೀಸಿದ ರಭಸಕ್ಕೆ ಬಾಲ್ ಡೈರೆಕ್ಟ್ ಆಗಿ ಹೋಗಿ ಬೌಲರ್‌ನ ಮುಖಕ್ಕೆ ಅಪ್ಪಳಿಸಿತ್ತು.
ಬಾಲ್ ಹೊಡೆದ ರಭಸಕ್ಕೆ ಬೌಲರ್ ಮುಖದಲ್ಲಿ ರಕ್ತ ಸುರಿಯಲು ಶುರುವಾಗಿತ್ತು, ಪರಿಸ್ಥಿತಿ ಕಂಡ ಬ್ಯಾಟ್ಸ್‌ಮ್ಯಾನ್ ಭಯದಿಂದ ತಬ್ಬಿಬ್ಬಾಗಿದ್ದರು. ಅಂಪೈರ್ ತಕ್ಷಣ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿದರು. ಲೆ ರೌಕ್ಸ್ ಅವರನ್ನು ತಕ್ಷಣವೇ ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಲಾಯಿತು.