newsics.com
ನಲುವತ್ತಾರು ವರ್ಷ ಹಿಂದೆ ಒಂದೇ ಕೊಡಲಿಯೇಟಿನಿಂದ ಹುಲಿಯನ್ನು ಕೊಂದಿದ್ದ ವೀರಮಹಿಳೆ ಲಾಲ್ ಝಾದಿಂಗಿ ತಮ್ಮ 72ನೇ ವಯಸ್ಸಿನಲ್ಲಿ ಶುಕ್ರವಾರ ಕ್ಯಾನ್ಸರ್ ನಿಂದ ಮೃತಪಟ್ಟರು. ಬಾಂಗ್ಲಾದೇಶದ ಗಡಿಯ ದಕ್ಷಿಣ ಮಿಜೋರಾಂನ ಲುಂಗ್ಲೀ ಜಿಲ್ಲೆಯ ಬೂರ್ಪೀ ಗ್ರಾಮದಲ್ಲಿ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ಹೇಳಿವೆ.
ಐಜ್ವಾಲ್ ನಲ್ಲಿರುವ ಮಿಜೋರಾಂ ರಾಜ್ಯ ಮ್ಯೂಸಿಯಂನಲ್ಲಿ ವೀಕ್ಷಕರನ್ನು ದಿಟ್ಟಿಸಿ ನೋಡುವ ವ್ಯಗ್ರ ದೃಷ್ಟಿಯ ಹುಲಿ, ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಇದು ಕಾಡಿನಿಂದ ಮ್ಯೂಸಿಯಂಗೆ ಬರಲು ಏನು ಕಾರಣ ಎನ್ನುವ ಅಂಶ ಸಾರ್ವಜನಿಕರ ನೆನಪಿನ ಬುತ್ತಿಯಲ್ಲಿಲ್ಲ.
ಮೃತ ಮಹಿಳೆ ಪತಿ, ನಾಲ್ವರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಕೇವಲ 26ನೇ ವಯಸ್ಸಿನಲ್ಲಿ ಗ್ರಾಮದ ಪಕ್ಕದ ಅರಣ್ಯದಲ್ಲಿ ಅನಿರೀಕ್ಷಿತವಾಗಿ ಹುಲಿ ಮಹಿಳೆಯ ಮೇಲೆ ದಾಳಿ ಮಾಡಿತ್ತು.
ಕೇವಲ 26ನೇ ವಯಸ್ಸಿನಲ್ಲಿ ಗ್ರಾಮದ ಪಕ್ಕದ ಅರಣ್ಯದಲ್ಲಿ ಅನಿರೀಕ್ಷಿತವಾಗಿ ಹುಲಿ ಮಹಿಳೆಯ ಮೇಲೆ ದಾಳಿ ಮಾಡಿತ್ತು. “ನಾನು ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ ಪಕ್ಕದ ಪೊದೆಯಲ್ಲಿ ಅಸಹಜವಾದ ಸದ್ದು ಕೇಳಿಬಂತು. ಕರಡಿ ಇರಬೇಕು ಎಂದು ನಾನು ಭಾವಿಸಿದೆ. ದೊಡ್ಡ ಧ್ವನಿಯಲ್ಲಿ ಸ್ನೇಹಿತರನ್ನು ಕರೆದೆ. ಆದರೆ ಯಾರೂ ಕೇಳಿಸಿಕೊಂಡಿಲ್ಲ” ಎಂದು ಮಹಿಳೆ ತನ್ನ ಸಾಹಸಗಾಥೆಯನ್ನು ವಿವರಿಸಿದ್ದರು.
ಈ ಸಾಹಸಕ್ಕಾಗಿ ಮಹಿಳೆ 1980ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿಯವರಿಂದ ಶೌರ್ಯ ಚಕ್ರ ಪ್ರಶಸ್ತಿ ಪಡೆದಿದ್ದರು. ಈ ವೀರವನಿತೆಯ ಸಾಹಸ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು.