Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 46 ವರ್ಷ ಬಳಿಕ ತೆರೆದ ಪುರಿ ಜಗನ್ನಾಥನ ರತ್ನ ಭಂಡಾರ, ವಿಡಿಯೋ‌ ನೋಡಿ
ದೇಶಪ್ರಮುಖ

46 ವರ್ಷ ಬಳಿಕ ತೆರೆದ ಪುರಿ ಜಗನ್ನಾಥನ ರತ್ನ ಭಂಡಾರ, ವಿಡಿಯೋ‌ ನೋಡಿ

Share
2 Min Read
SHARE

newsics.com

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ವನ್ನು 46 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗಿದೆ.

ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಆರು ವರ್ಷಗಳ ಬಳಿಕ ಈ ರತ್ನ ಭಂಡಾರದ ಬಾಗಿಲನ್ನು ನಕಲಿ ಕೀಲಿಕೈ ಬಳಸಿ ಭಾನುವಾರ ಮಧ್ಯಾಹ್ನ 1:28ರ ಶುಭ ಮುಹೂರ್ತದಲ್ಲಿ ತೆರೆಯಲಾಯಿತು.

ಪುರಿ ಜಗನ್ನಾಥ ದೇಗುಲದಲ್ಲಿರುವ ರತ್ನ ಭಂಡಾರದಲ್ಲಿರುವ ಬೆಲೆಬಾಳುವ ವಸ್ತುಗಳ ಡಿಜಿಟಲ್ ಕ್ಯಾಟಲಾಗ್ ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದ್ದು, ಅದು ಅವುಗಳ ತೂಕ ಮತ್ತು ತಯಾರಿಕೆಯ ವಿವರಗಳನ್ನು ಹೊಂದಿರುತ್ತದೆ. ಅಲ್ಲದೆ ರತ್ನ ಭಂಡಾರ ದೀರ್ಘಕಾಲದಿಂದ ಮುಚ್ಚಿದ್ದರಿಂದ, ದುರಸ್ತಿ ಮಾಡುವ ಉದ್ದೇಶಕ್ಕಾಗಿ ಭಾನುವಾರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಪ್ರವೇಶಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಭಂಡಾರವನ್ನು ತೆರೆಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಂಡಾರವನ್ನು ತೆರೆದಾಗ ಒರಿಸ್ಸಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿಸ್ವನಾಥ್ ರಾತ್, ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಯ (ಎಸ್‌ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರವಿಂದ ಪಾಧಿ, ಎಎಸ್‌ಐ ಸೂಪರಿಂಟೆಂಡೆಂಟ್ ಡಿ.ಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜನ ಪ್ರತಿನಿಧಿ ಸೇರಿದಂತೆ 11 ಜನರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಭು ಜಗನ್ನಾಥರ ಇಚ್ಛೆಯಂತೆ, ಒಡಿಶಾ ಅಸ್ಮಿತೆಯೊಂದಿಗೆ ಒಡಿಯಾ ಸಮುದಾಯವು ಮುನ್ನಡೆಯುವ ಪ್ರಯತ್ನವನ್ನು ಆರಂಭಿಸಿದೆ. ಜಗನ್ನಾಥ ದೇಗುಲದ ನಾಲ್ಕು ದ್ವಾರಗಳನ್ನು ತೆರೆಯಲಾಯಿತು. ಭಾನುವಾರ ನಿಮ್ಮ ಇಚ್ಛೆಯ ಮೇರೆಗೆ 46 ವರ್ಷಗಳ ನಂತರ ಒಂದು ಮಹತ್ತರ ಉದ್ದೇಶಕ್ಕಾಗಿ ರತ್ನ ಭಂಡಾರವನ್ನು ತೆರೆಯಲಾಯಿತು’ ಎಂದು ಮುಖ್ಯಮಂತ್ರಿ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 16 ಮಂದಿ ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಜುಲೈ 14ರಂದು ರತ್ನ ಭಂಡಾರವನ್ನು ಮತ್ತೆ ತೆರೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

‘ದೀರ್ಘಕಾಲದಿಂದ ಮುಚ್ಚಿದ್ದರಿಂದ, ಕೇವಲ ರಿಪೇರಿ ಮಾಡುವ ಉದ್ದೇಶಕ್ಕಾಗಿ ಮಾತ್ರ ತೆರೆಯಲಾಗುತ್ತಿದೆ’ ಎಂದು ಭಗವಾನ್‌ ಬಲಭದ್ರನ ಮುಖ್ಯ ಸೇವಕ ಹಾಲಧರ್‌ ದಸ್‌ಮೊಹಾಪಾತ್ರ ಸ್ಪಷ್ಟಪಡಿಸಿದ್ದರು.

ಆಭರಣಗಳನ್ನು ತೂಕ ಮಾಡುವ ಬದಲಾಗಿ ಅವುಗಳನ್ನು ಲೆಕ್ಕಹಾಕಿ ಮತ್ತೆ ಸೀಲ್‌ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದರು.

ರತ್ನಭಂಡಾರವು ಮೂರು ಭಾಗಗಳನ್ನು ಒಳಗೊಂಡಿದೆ. ಹೊರ ಕೋಣೆಯಲ್ಲಿ ಸಂಪ್ರದಾಯಕ್ಕೆ ಬಳಸುವ ಆಭರಣಗಳಿದ್ದು, ಒಳಭಾಗದಲ್ಲಿರುವ ಎರಡು ಕೋಣೆಗಳಲ್ಲಿ ಬಳಕೆಯಾಗದ ಆಭರಣಗಳು, ಶತಮಾನಗಳಿಂದ ರಾಜ ಕುಟುಂಬಗಳು, ಭಕ್ತರು ನೀಡಿದ ಆಭರಣ ಒಳಗೊಂಡಿದೆ ಎಂದು ದೇವಸ್ಥಾನದ ಹಿರಿಯ ಸೇವಕರೊಬ್ಬರು ತಿಳಿಸಿದ್ದರು. ಈ ಭಂಡಾರವನ್ನು 1978ರಲ್ಲಿ ಕೊನೆಯ ಬಾರಿ ತೆರೆಯಲಾಗಿತ್ತು.

ರತ್ನ ಭಂಡಾರ ತೆರೆಯುವ ಸಲುವಾಗಿ ಸಮಿತಿಯು ಸಂಪೂರ್ಣ ಪ್ರಕ್ರಿಯೆಗಾಗಿ ಮೂರು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOP ಗಳು) ಮಾಡಿತ್ತು.

ಮೊದಲನೆಯದು ರತ್ನ ಭಂಡಾರವನ್ನು ಪುನರಾರಂಭಿಸಲು ಸಂಬಂಧಿಸಿದ್ದಾಗಿದ್ದು, ಎರಡನೆಯದು ತಾತ್ಕಾಲಿಕ ರತ್ನ ಭಂಡಾರ ನಿರ್ವಹಣೆಗೆ ಸಂಬಂಧಿಸಿದ್ದಾಗಿದೆ ಮತ್ತು ಮೂರನೆಯದು ಬೆಲೆಬಾಳುವ ವಸ್ತುಗಳ ದಾಸ್ತಾನುಗಳಿಗೆ ಸಂಬಂಧಿಸಿದೆ.

ಈಗ ದಾಸ್ತಾನು ಕಾರ್ಯ ಪ್ರಾರಂಭವಾಗುವುದಿಲ್ಲ. ಮೌಲ್ಯಮಾಪಕರು, ಅಕ್ಕಸಾಲಿಗರು ಮತ್ತು ಇತರ ತಜ್ಞರ ಆಗಮನದ ಕುರಿತು ಸರ್ಕಾರದಿಂದ ಅನುಮೋದನೆ ಪಡೆದ ನಂತರ ಇದನ್ನು ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರತ್ನಭಂಡಾರಕ್ಕೆ ಹಾವುಗಳ ಕಾವಲು!

ರತ್ನಭಂಡಾರದಲ್ಲಿ ಹಾವುಗಳ ಇರುವಿಕೆ ಪತ್ತೆಯಾಗಿದ್ದು, ಇದೇ ಕಾರಣಕ್ಕಾಗಿ ಹಾವು ಹಿಡಿಯುವವರ ಎರಡು ತಂಡಗಳನ್ನು ದೇವಸ್ಥಾನಕ್ಕೆ ಕರೆಸಿಕೊಳ್ಳಲಾಗಿತ್ತು. ಸಮಿತಿಯ ಸದಸ್ಯರು ಖಜಾನೆಯೊಳಗೆ ಹೋಗುತ್ತಿದ್ದಂತೆ ಹಾವು ಹಿಡಿಯುವವರ ತಂಡ ಹಾವುಗಳನ್ನು ತೆರವುಗೊಳಿಸಿದೆ.

#ODISHA | Ratna Bhandar of Sri Jagannath Temple in Puri re-opened today after 46 years.

The Odisha government had approved the opening of the Ratna Bhandar after more than four decades to carry out the inventorization of valuables.#Puri #jagannathyatra #JagannathMandir… pic.twitter.com/HKvXoIWVJL

— DD News (@DDNewslive) July 14, 2024

#WATCH | Odisha | Ratna Bhandar of Sri Jagannath Temple in Puri re-opened today after 46 years.

Visuals from outside Shri Jagannath Temple. pic.twitter.com/BzK3tfJgcA

— ANI (@ANI) July 14, 2024

ಗುಂಡಿನ ದಾಳಿಯಿಂದ ಟ್ರಂಪ್ ಪಾರಾಗಲು ಪುರಿ ಜಗನ್ನಾಥ ಕಾರಣ!

ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲಿನ ಮುಂದೆ ಮೂರ್ಛೆ ಹೋದ  ಎಸ್‌ಪಿ!

ಶೆಡ್‌ನಲ್ಲಿ ಮತ್ತೊಂದು ಮರ್ಡರ್‌.. ಯುವಕನನ್ನು ಮದುವೆ ಮಾಡಿಸುವುದಾಗಿ ಕರೆದು ಸುಟ್ಟು ಹಾಕಿದ ದುಷ್ಕರ್ಮಿಗಳು

ಜುಲೈ.22ಕ್ಕೆ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ

TAGGED:Jagannath's Ratna Bhandara of Puri opened after 46 years
Share This Article
Facebook Twitter Copy Link Print
Previous Article ದಿನ‌ ಭವಿಷ್ಯ 15-07-2024 … ಮಿಥುನ- ಆದಾಯಕ್ಕಿಂತ ಹೆಚ್ಚು ಖರ್ಚು, ತುಲಾ- ಸ್ನೇಹಿತರಿಂದ ಅನಿರೀಕ್ಷಿತ ಸಹಾಯ, ನಿಮ್ಮ ಇಂದಿನ ರಾಶಿ ಭವಿಷ್ಯದಲ್ಲೇನಿದೆ?
Next Article ಮುಡಾ ಸೈಟ್ ಹಗರಣ ತನಿಖೆಗೆ ನ್ಯಾ.ದೇಸಾಯಿ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚನೆ: 6 ತಿಂಗಳಲ್ಲಿ ವರದಿಗೆ ಸರ್ಕಾರ ಸೂಚನೆ

Popular Posts

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕಪ್ರಮುಖ

ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?