newsics.com
ಶುಭೋದಯ
ನಿತ್ಯ ಪಂಚಾಂಗ
15 ಜುಲೈ 2024, ಸೋಮವಾರ
ವಿಶ್ವ ಯುವ ಕೌಶಲ್ಯ ದಿನ
ಗತಶಾಲಿ – 1945
ಗತಕಲಿ – 5124
ದಿನಾಂಕ – 15/07/2024
ತಿಂಗಳು – ಜುಲೈ
ವಾರ- ಸೋಮವಾರ
ಬಣ್ಣ- ಬಿಳಿ
ಸಂವತ್ಸರ- ಕ್ರೋಧಿ
ಅಯನ- ಉತ್ತರಾಯಣ
ಋತು- ಗ್ರೀಷ್ಮ
ಮಾಸ- ಆಷಾಢ
ಪಕ್ಷ- ಶುಕ್ಲ
ತಿಥಿ- ನವಮಿ 19:18:46
ನಕ್ಷತ್ರ- ಸ್ವಾತಿ 24:28:48*
ಯೋಗ- ಸಿದ್ದಿ 06:58:39
ಕರಣ – ಬಾಳವ 06:26:20
ಕರಣ – ಕೌಳವ 19:18:46
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ- ತುಲಾ
ಸೂರ್ಯ ರಾಶಿ- ಮಿಥುನ
ಸೂರ್ಯೋದಯ- 06:02:21
ಸೂರ್ಯಾಸ್ತ- 18:48:54
ಹಗಲಿನ ಅವಧಿ- 12:46:33
ರಾತ್ರಿಯ ಅವಧಿ- 11:13:42
ಚಂದ್ರೋದಯ- 13:22:12
ಚಂದ್ರಾಸ್ತ- 25:09:38*
ರಾಹು ಕಾಲ- 07:38 – 09:14 ಅಶುಭ
ಯಮಘಂಡ ಕಾಲ- 10:50 – 12:26 ಅಶುಭ
ಗುಳಿಕ ಕಾಲ- 14:01 – 15:37
ಅಭಿಜಿತ್- 12:00 – 12:51 ಶುಭ
ದುರ್ಮುಹೂರ್ತ- 12:51 – 13:42 ಅಶುಭ
ದುರ್ಮುಹೂರ್ತ 15:24 – 16:16 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಬದುಕು ಯಾವತ್ತೂ ನಮ್ಮ ಆಲೋಚನೆಗಳ ಪ್ರತಿಬಿಂಬ. ಹಾಗಾಗಿ ಒಳ್ಳೆಯ ವಿಷಯಗಳನ್ನೇ ಯೋಚಿಸುವುದು ಒಳಿತು.
– ಡೇನಿಯಲ್ ಪೀರ್
***
ಇಂದಿನ ಇತಿಹಾಸ
ಜುಲೈ 15
ವಿಶ್ವ ಯುವ ಕೌಶಲ್ಯ ದಿನ
ಇಂದು ವಿಶ್ವ ಯುವ ಕೌಶಲ್ಯ ದಿನ. ಶಿಕ್ಷಿತ ಯುವ ಸಮುದಾಯಕ್ಕೆ ನೌಕರಿ ಸಿಗಲು ಬೇಕಾದ ಕೌಶಲ್ಯದ ತರಬೇತಿ ನೀಡುವುದು ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುವುದು ಸ್ಕಿಲ್ ಇಂಡಿಯಾದ ಮೂಲಮಂತ್ರವಾಗಿದೆ. ಎಲ್ಲಾ ವಲಯಗಳು ಮತ್ತು ರಾಜ್ಯಗಳಲ್ಲಿ ಕೌಶಲ್ಯ ತರಬೇತಿ ಚಟುವಟಿಕೆಗಳನ್ನು ರಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 15, 2015 ರಂದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಆರಂಭಿಸಿದ್ದರು.
ಪ್ರಮುಖ ಘಟನೆಗಳು
* ಭಾರತದ ಖ್ಯಾತ ಸಮಾಜ ಸುಧಾರಕ, ವರ್ತಕ, ಕೈಗಾರಿಕೋದ್ಯಮಿ ಸರ್ ಜೆಮ್ ಶೆಟ್ ಜಿ ಜೀಜಾಬಾಯಿ ಅವರು ಜುಲೈ 15, 1783 ಮುಂಬೈಯಲ್ಲಿ ಜನಿಸಿದರು. ಕೆರೆ, ಬಾವಿ, ರಸ್ತೆ, ಆಸ್ಪತ್ರೆಗಳ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಆರಂಭ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಇತ್ಯಾದಿಗಳ ಮೂಲಕ ತಮ್ಮ ಅಪಾರ ಸಂಪತ್ತನ್ನು ಇವರು ಸಮಾಜ ಸೇವೆಗೆ ವಿನಿಯೋಗಿಸಿದರು.
* ಜುಲೈ 15, 1904 ರಂದು ಮೊದಲ ಬುದ್ಧನ ದೇಗುಲವನ್ನು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ತೆರೆಯಲಾಯಿತು.
* ಜುಲೈ 15, 1979 ರಂದು ಭಾರತದ 4ನೇ ಪ್ರಧಾನ ಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ತಮ್ಮ ಪದವಿಗೆ ರಾಜಿನಾಮೆ ನೀಡಿದರು.
* ಜುಲೈ 15, 1980 ರಂದು “ಕೇಸರಿ” ಮತ್ತು “ಮರಾಠ” ಪತ್ರಿಗಳ ಸಂಪಾದಕರಾಗಿದ್ದ ಜಗನ್ನಾಥರಾವ್ ಜೋಶಿ ನಿಧನ.