newsics.com
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯಾ ಯತ್ನ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ.
ಶನಿವಾರ ಪೆನ್‌ಸಿಲ್ವೇನಿಯಾದ ಬಟ್ಲರ್ ಎಂಬಲ್ಲಿ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ‍್ಯಾಲಿ ನಡೆಯುತ್ತಿದ್ದಾಗ ಈ ದಾಳಿ ನಡೆದಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಗುಂಡಿನ ದಾಳಿ ನಡೆಯಿತು.
ಈ ದಾಳಿಯಲ್ಲಿ ಬಂದೂಕುಧಾರಿ ಮತ್ತು ಪ್ರೇಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಪ್ರೇಕ್ಷಕನ ಸ್ಥಿತಿ ಗಂಭೀರವಾಗಿದೆ. ಟ್ರಂಪ್ ಕೂಡ ಗಾಯಗೊಂಡಿದ್ದಾರೆ.
ಈ ಗುಂಡಿನ ದಾಳಿಯನ್ನು ಹತ್ಯೆ ಯತ್ನ ಎಂದು ಹೇಳಿರುವ ಅಲ್ಲಿನ ಕಾನೂನು ಜಾರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬಹಿರಂಗವಾಗಿರುವ ವಿಡಿಯೋ ದೃಶ್ಯದಲ್ಲಿ ಡೊನಾಲ್ಡ್ ಟ್ರಂಪ್ ನೆಲಕ್ಕೆ ಬೀಳುವುದು ಕಂಡುಬಂದಿದೆ. ಗುಂಡಿನ ಸದ್ದು ಕೇಳಿದ ಕೂಡಲೇ ಭದ್ರತಾ ಅಧಿಕಾರಿಗಳು ಟ್ರಂಪ್ ಅವರನ್ನು ಸುತ್ತುವರಿದಿದ್ದರು. ಆದರೂ ಗುಂಡು ಟ್ರಂಪ್ ಅವರ ಮುಖ ಸವರಿಕೊಂಡು ಹೋಗಿದೆ. ಕಿವಿಯ ಬಳಿ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಈ ದಾಳಿಯನ್ನು ಖಂಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಸುರಕ್ಷಿತ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಯುಎಸ್ ರಹಸ್ಯ ಸೇವೆ ಹೇಳಿದೆ.
ಕಾನೂನು ಜಾರಿ ಅಧಿಕಾರಿಗಳು ದಾಳಿಕೋರನನ್ನು ಹೊಡೆದುರುಳಿಸಿದರು. 1981ರಲ್ಲಿ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಧ್ಯಕ್ಷ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯನ್ನು ಹತ್ಯೆಗೆ ಯತ್ನಿಸಿದ ಮೊದಲ ಪ್ರಯತ್ನ ಇದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ ನಾಲ್ಕು ತಿಂಗಳ ಮುಂಚಿತವಾಗಿ ಈ ದಾಳಿ ನಡೆದಿದೆ.
ದಿನ ಭವಿಷ್ಯ 14-07-2024 … ಮೇಷ- ದಿಢೀರ್ ಧನ ಲಾಭ, ಮೀನ- ಉದ್ಯೋಗದಲ್ಲಿ ಬಡ್ತಿ, ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ?
AI ತಂತ್ರಜ್ಞಾನ ಮೂಲಕ ಹೊಸ ಮೆಟ್ರೋ ಮಾರ್ಗಗಳಲ್ಲೂ ಅಪರ್ಣಾ ಧ್ವನಿಯನ್ನೇ ಉಳಿಸಿಕೊಳ್ಳಲು BMRCL ಚಿಂತನೆ
ತಿರುಪತಿಯಲ್ಲಿ ಮರದ ಕೊಂಬೆ ಬಿದ್ದು ಬೆಂಗಳೂರಿನ ಮಹಿಳೆಗೆ ಗಾಯ, ಆಸ್ಪತ್ರೆಗೆ ದಾಖಲು, ವಿಡಿಯೊ ನೋಡಿ